Home » ಛತ್ತೀಸ್‌ಗಢ : 31 ನಕ್ಸಲರ ಮಾರಣಹೋಮ
 

ಛತ್ತೀಸ್‌ಗಢ : 31 ನಕ್ಸಲರ ಮಾರಣಹೋಮ

by Kundapur Xpress
Spread the love

ಬಿಜಾಪುರ (ಛತ್ತೀಸ್‌ಗಢ) : ಎಡಪಂಥೀಯ ಪ್ರಮುಖ ಉಗ್ರವಾದದ ವಿರುದ್ಧದ ಕಾರ್ಯಾಚರಣೆಯಲ್ಲಿ, ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭಾನುವಾರ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು 31 ನಕ್ಸಲರನ್ನು ಹೊಡೆದುರುಳಿಸಿವೆ. ಇಬ್ಬರು ಭದ್ರತಾ ಸಿಬ್ಬಂದಿಯೂ ಪ್ರಾಣ ತ್ಯಾಗಮಾಡಿದ್ದು ಅನೇಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದ್ರಾವತಿ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ನಕ್ಸಲರು ಅಡಗಿರುವ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ 650ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ವಿವಿಧ ಕಡೆಗಳಿಂದ ಅರಣ್ಯವನ್ನು ಪ್ರವೇಶಿಸಿ 31 ನಕ್ಸಲರನ್ನು ಅವರ ಭದ್ರ ಅಡಗು ತಾಣದಲ್ಲೇ ಸದೆಪಡಿದಿದ್ದಾರೆ ಎಂದು ಛತ್ತೀಸ್‌ಗಢದ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ತಿಳಿಸಿದ್ದಾರೆ.

ದೇಶ ಮತ್ತು ರಾಜ್ಯದಲ್ಲಿ ನಕ್ಸಲಿಸಂ ಅಂತ್ಯವಾಗುವುದು ಖಚಿತ ಎಂದು ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ರಾಜ್ಯ 2026ರ ಮಾರ್ಚ್ ವೇಳೆಗೆ ನಕ್ಸಲಿಸಂ ಅನ್ನು ತೊಡೆದುಹಾಕಲಿದೆ ಎಂದು ಅವರು ಹೇಳಿದರು.

ಇಬ್ಬರು ಮೃತ್ಯು, ಮತ್ತಿಬ್ಬರಿಗೆ ಗಾಯ

: ರಾಜ್ಯ ಡಿಆರ್‌ಜಿ ಮತ್ತು ಎಸ್‌ಟಿಎಫ್‌ನ ತಲಾ ಒಬ್ಬ ಸಿಬ್ಬಂದಿ ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದಾರೆ ಮತ್ತು ಇತರ ಇಬ್ಬರು ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಉತ್ತಮ ವೈದ್ಯಕೀಯ, ಸೌಲಭ್ಯಕ್ಕೆ ವಿಮಾನದಲ್ಲಿ ಸಾಗಿಸಲಾಗಿದೆ.

 

Related Articles

error: Content is protected !!