ರಾಜಗೀರ್ (ಬಿಹಾರ ): ನಳಂದ ವಿಶ್ವವಿದ್ಯಾಲಯ ಭಾರತದ ಅತಿ ಹಳೆಯ ‘ವಿಶ್ವವಿದ್ಯಾಲಯ ಎಂದು ಖ್ಯಾತಿ ಪಡೆದಿರುವ 1600 ವರ್ಷಗಳಷ್ಟು ಪುರಾತನವಾದ ವಿಶ್ವವಿದ್ಯಾಲಯ ಇದನ್ನು 800 ವರ್ಷಗಳ ಹಿಂದೆ ದಾಳಿಕೋರರು ಧ್ವಂಸ ಮಾಡಿದ್ದರು. ಅದರ ಗತವೈಭವ ಇದೀಗ ಮರಳಿದೆ. ನಳಂದ ವಿವಿಯು 1749 ಕೋಟಿ ರು. ವೆಚ್ಚದ 455 ಎಕರೆ ಹೊಸ ಕ್ಯಾಂಪಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಲೋಕಾರ್ಪಣೆ ಮಾಡಿದ್ದಾರೆ
ಪಟನಾದ ಆಗೇಯಕ್ಕೆ ಸುಮಾರು 95 ಕಿಮೀ ದೂರದಲ್ಲಿರುವ ನಳಂದ ವಿಶ್ವವಿದ್ಯಾಲಯವು ಸುಮಾರು 1600 ವರ್ಷಗಳ ಹಿಂದೆ ಸ್ಥಾಪಿತವಾಗಿತ್ತು ಹಾಗೂ ವಿಶ್ವದ ಮೊದಲ ವಸತಿ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿತ್ತು. ಇದನ್ನು ಗುಪ್ತ ರಾಜವಂಶದ ಕುಮಾರಗುಪ್ತ-1 (ಕ್ರಿ.ಶ. 413-455) ಸ್ಥಾಪಿಸಿದ್ದ. ಆದರೆ 12ನೇ ಶತಮಾನದಲ್ಲಿ ಇದನ್ನು ದಾಳಿಕೋರರು ಧ್ವಂಸಗೊಳಿಸಿದ್ದರು. 2016ರ ಜುಲೈನಲ್ಲಿ ನಳಂದ ವಿವಿಯ ಅವಶೇಷಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಗಿತ್ತು.