59
ಶ್ರೀನಗರ : ಜಮ್ಮು ಕಾಶ್ಮೀರಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಭೇಟಿ ನೀಡಲಿದ್ದು, ಇದಕ್ಕೂ ಮುನ್ನ ಗುರುವಾರ 32 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ದಾಳಿ ನಡೆಸಿದೆ. ಭಯೋತ್ಪಾದನೆಗೆ ಧನ ಸಹಾಯ ಷಡ್ಯಂತ್ರ ಪ್ರಕರಣದಡಿ ಎನ್ ಐಎ ದಾಳಿ ನಡೆಸಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಶೋಪಿಯಾನ್, ಕುಲ್ಲಾಮ್, ಪುಲ್ವಾಮ್, ಸೋಪೊರ್ ಮತ್ತು ಕುಪ್ಪಾರ ಜಿಲ್ಲೆಗಳಲ್ಲಿ ಜಮ್ಮು ಕಾಶ್ಮೀರ ಪೊಲೀಸ್, ಸಿಆರ್ ಪಿಎಫ್ ಕಮಾಂಡೋಗಳೊಂದಿಗೆ ಎನ್‌ಐಎ ಜಂಟಿ ಕಾರ್ಯಾಚರಣೆ ನಡೆಸಿದೆ. ಭಯೋತ್ಪಾದನೆಗೆ ಧನಸಹಾಯ ಷಡ್ಯಂತ್ರ ಪ್ರಕರಣದಲ್ಲಿ ಇನ್ನೂ ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಸಂಪರ್ಕಜಾಲಗಳನ್ನು ಕಿತ್ತೊಗೆಯುವ ಉದ್ದೇಶದಿಂದ ಎನ್‌ಐಎ ಕಾರ್ಯಾಚರಣೆ ನಡೆಸಿದೆ.

