Home » ಹೆದ್ದಾರಿ ಅಪಘಾತಗಳಿಗೆ ರಸ್ತೆ ನಿರ್ಮಿಸಿದವರೇ ಹೊಣೆ
 

ಹೆದ್ದಾರಿ ಅಪಘಾತಗಳಿಗೆ ರಸ್ತೆ ನಿರ್ಮಿಸಿದವರೇ ಹೊಣೆ

ನಿತಿನ್‌ ಗಢ್ಕರಿ

by Kundapur Xpress
Spread the love

ನವದೆಹಲಿ : ದೋಷಮಯ ಹೆದ್ದಾರಿ ನಿರ್ಮಾಣ ಜಾಮೀನು ರಹಿತ ಅಪರಾಧವಾಗಬೇಕು. ಅದರಿಂದಾಗುವ ಅಪಘಾತಗಳಿಗೆ ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳನ್ನೇ ಹೊಣೆ ಮಾಡಿ ಜೈಲಿಗೆ ಹಾಕಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ, ರಸ್ತೆ ಅಪಘಾತದಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ನಿರ್ಮಾಣದಲ್ಲಿ ದೋಷ ಪ್ರಮುಖ ಕಾರಣ ಹೀಗಾಗಿ ಜಾಮೀನು ರಹಿತ ಅಪರಾಧವನ್ನಾಗಿ ಘೋಷಿಸಿ, ಗುತ್ತಿಗೆದಾರರು, ಎಂಜಿನಿಯರ್‌ಗಳನ್ನು ಅಪಘಾತಕ್ಕೆ ಹೊಣೆ ಮಾಡಿ ಜೈಲಿಗೆ ಹಾಕಬೇಕು’ ಎಂದರು. 

 

Related Articles

error: Content is protected !!