ಹೊಸದಿಲ್ಲಿ : ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟವು 18ನೇ ಲೋಕಸಭೆ ಚುನಾವಣೆಯಲ್ಲಿ 293 ಸ್ಥಾನಗಳನ್ನು ಗೆದ್ದು ಬಹುಮತ ಪಡೆಯುವುದರೊಂದಿಗೆ ವಾರಾಂತ್ಯಕ್ಕೆ ಹೊಸ ಸರ್ಕಾರ ರಚಿಸಲು ಸಜ್ಜಾಗಿದೆ. ಸತತ ಮೂರನೇ ಅವಧಿಗೆ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಇತಿಹಾಸ ಸೃಷ್ಟಿಸಲಿದ್ದಾರೆ ಇದೇ ವೇಳೆ ಬುಧವಾರ ಮಧ್ಯಾಹ್ನ ನಡೆದ ಎನ್‌ಡಿಎ ಸಭೆಯಲ್ಲಿ ಮೈತ್ರಿಕೂಟದ ನಾಯಕರಾಗಿ ನರೇಂದ್ರ ಮೋದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಸಭೆಗೂ ಮೊದಲು ಬೆಳಗ್ಗೆ ಎನ್‌ಡಿಎ ನಾಯಕರು ಮೋದಿ ಅವರನ್ನು ಭೇಟಿಯಾಗಿ ಚುನಾವಣೆ ಫಲಿತಾಂಶದ ಬಗ್ಗೆ ಅವಲೋಕನ ನಡೆಸಿ, ಸರ್ಕಾರ ರಚನೆ ಬಗ್ಗೆ ಚರ್ಚೆ ನಡೆಸಿದರು. ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ತು ಮತ್ತು ಜನತಾ ದಳದ (ಜೆಡಿಯು) ನಾಯಕ ನಿತೀಶ್ ಕುಮಾರ್ ಅವರನ್ನು ಒಳಗೊಂಡಂತೆ ಎನ್ ಡಿ ಎ ಮೈತ್ರಿಕೂಟದ ಇತರೆ ನಾಯಕರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದವು. ಈ ವೇಳೆ ‘ಎನ್ ಡಿ ಎ ಮೈತ್ರಿಕೂಟದ ನಾಯಕರು ಮೋದಿ ಅವರಿಗೆ ಅಧಿಕೃತವಾಗಿ ಬೆಂಬಲ ಪತ್ರ ನೀಡಿದರು.