ನವದೆಹಲಿ : ದೇಶ ವಿರೋಧಿ ಕೃತ್ಯಗಳ ಕಾರಣ ನಿಷೇಧಕ್ಕೆ ಒಳಗಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ), ಜಿಹಾದಿ ಕೃತ್ಯಗಳ ಮೂಲಕ ಭಾರತದಲ್ಲಿ ಇಸ್ಲಾಮಿಕ್ ಅಭಿಯಾನದ ಸಂಚು ಹೊಂದಿದೆ. ಇದಕ್ಕಾಗಿ ಹಿಂಸೆ, ಉಗ್ರವಾದದ ಹೊರತಾಗಿ ಬೀದಿ ನಾಟಕ, ರಾಜಕೀಯ ವಿಷ ಯಗಳನ್ನೂ ಬಳಸಿಕೊಳ್ಳುತಿದೆ ಎಂಬ ಗಂಭೀರ ವಿಷಯವನ್ನು ಜಾರಿ ನಿರ್ದೇಶನಾಲಯ ಬಹಿರಂಗಪಡಿಸಿದೆ.
ಅಲ್ಲದೆ, ವಿದೇಶಗಳಲ್ಲಿ ಪಿಎಫ್‌ಐಗೆ 13000 ಸಕ್ರಿಯ ಕಾರ್ಯಕರ್ತರು ಇದ್ದಾರೆ. ಇದುವರೆಗೂ 26 ಪಿಎಫ್‌ಐ ಸದಸ್ಯರನ್ನು ಬಂಧಿಸಿದ್ದು, ಸಂಘಟನೆಗೆ ಸೇರಿದ 62 ಕೋಟಿ ರು.ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ ಎಂದು ಇ.ಡಿ. ಹೇಳಿದೆ. ಅ.16ರಂದು ಪಿಎಫ್‌ಐ ನಂಟಿನ ವ್ಯಕ್ತಿಗಳಿಗೆ ಸೇರಿದ 35 ಕೋಟಿ ರು. ಮೌಲ್ಯದ ಆಸ್ತಿ ಜಪ್ತಿ ಮಾಡಿರುವುದಾಗಿ ಹೇಳಿಕೆ ಬಿಡುಗಡೆ ಮಾಡಿರುವ ಇ.ಡಿ., ಈ ವೇಳೆ ಪಿಎಫ್‌ಐನ ಕಾರ್ಯವಿಧಾನಗಳ ಕುರಿತು ಬೆಳಕು ಚೆಲ್ಲಿದೆ.