ಹೊಸದಿಲ್ಲಿ: ದೇಶವನ್ನು ವಸ್ತುಶಃ ಬಂಧೀಖಾನೆಯಾಗಿ ಪರಿವರ್ತಿಸಿದ್ದ ತುರ್ತು ಪರಿಸ್ಥಿತಿಗೆ ಜೂ.25ರಂದು ವಾರ್ಷಿಕೋತ್ಸವ, ಸಂವಿಧಾನವನ್ನು ಕಾಲಕಸ ಮಾಡಿ, ದೇಶಕ್ಕೆ ಬಲವಂತ ತುರ್ತು ಪರಿಸ್ಥಿತಿ ಹೇರಿ, ವಿಪಕ್ಷೀಯರು, ಭಿನ್ನಮತೀಯರೆಲ್ಲರನ್ನು ಪೊಲೀಸರ ಬಲದಿಂದ ಜೈಲುಗಳಿಗೆ ದಬ್ಬಿದ, ಪತ್ರಿಕಾ ಸ್ವಾತಂತ್ರ್ಯಕ್ಕೆ ಕತ್ತರಿ ಹಾಕಿದ ಕಾಂಗ್ರೆಸ್ ನಾಯಕರ ಅಂದಿನ ಹೇಯ ಕೃತ್ಯ ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಗೇ ಕಪ್ಪುಚುಕ್ಕೆ ಎಂದು ಪ್ರಧಾನಿ ತರಾಟೆಗೆತ್ತಿಕೊಂಡರು
ಹಂಗಾಮಿ ಸ್ಪೀಕರ್ ಆಯ್ಕೆ ಬಗ್ಗೆ ಇಂಡಿ ಕೂಟದ ಆಕ್ಷೇಪ- ಪ್ರತಿಭಟನೆ ಸಹಿತ ಪ್ರತಿಯೊಂದು ಜನಪರ ವಿಚಾರದಲ್ಲೂ ತನ್ನ ಸರ್ಕಾರವನ್ನು ವಿನಾಕಾರಣ ಗುರಿ ಮಾಡುತ್ತಿರುವುದನ್ನು ತೀವ್ರವಾಗಿ ತರಾಟೆಗೆತ್ತಿಕೊಂಡ ಪ್ರಧಾನಿ ಮೋದಿ, ಸಂಸತ್ತಿನಲ್ಲಿ ಯಾವುದೇ ವಿಷಯದ ಬಗ್ಗೆ ಆರೋಗ್ಯಪೂರ್ಣ ಚರ್ಚೆ ನಡೆಯಬೇಕೆಂದು ದೇಶದ ಜನತೆ ಆಶಿಸುತ್ತಾರೆ ವಿನಾ ಪ್ರಹಸನ, ಅಶ್ರದ್ಧೆ ಗೊಂದಲಗಳನ್ನಲ್ಲ ಎಂದು ನುಡಿದರು