Home » ದೇಶಕ್ಕೆ ಜಾತ್ಯಾತೀತ ನಾಗರಿಕ ಸಂಹಿತೆ
 

ದೇಶಕ್ಕೆ ಜಾತ್ಯಾತೀತ ನಾಗರಿಕ ಸಂಹಿತೆ

by Kundapur Xpress
Spread the love

ನವದೆಹಲಿ : ದೇಶಾದ್ಯಂತ ಏಕರೂಪದ ನಾಗರಿಕ ಸಂಹಿತೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಏಕರೂಪದ ನಾಗರಿಕ ಸಂಹಿತೆಯನ್ನು ‘ಜಾತ್ಯತೀತ ನಾಗರಿಕ ಸಂಹಿತೆ” ಎಂಬ ಹೊಸ ಹೆಸರಿನಿಂದ ಕರೆದಿದ್ದಾರೆ ಹಾಗೂ ಈವರೆಗಿನ ನಾಗರಿಕ ಸಂಹಿತೆಗಳನ್ನು ‘ಕೋಮುವಾದಿ ನಾಗರಿಕ ಸಂಹಿತೆಗಳು’ ಎಂದಿದ್ದಾರೆ. ತನ್ಮೂಲಕ, ಬಿಜೆಪಿಯ ಈ ಮಹತ್ವದ ಅಜೆಂಡಾವನ್ನು ಜಾತ್ಯತೀತ ಸಮಾಜದ ಸೃಷ್ಟಿಯ ಅಸ್ತ್ರವನ್ನಾಗಿ ಬಿಂಬಿಸುವ ಸುಳಿವು ನೀಡಿದ್ದಾರೆ. ಮೋದಿ ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಅವರು ಈಗಿನ ಸಂಹಿತೆಗಳನ್ನು ‘ಕೋಮುವಾದಿ ಸಂಹಿತೆ’ ಎಂದು ಕರೆದಿರುವುದು ಸಂವಿಧಾನಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್‌ಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಮೋದಿ ಹೇಳಿದ್ದೇನು?

ಕೆಂಪುಕೋಟೆಯ ಮೇಲೆ 78ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ನಡೆಸಿ ಗುರುವಾರ ಮಾತನಾಡಿದ ಮೋದಿ, ‘ದೇಶದಲ್ಲಿ ಸದ್ಯ ಇರುವ ಕಾಯ್ದೆಗಳು ತಾರತಮ್ಯದಿಂದ ಕೂಡಿವೆ. ಈ ದೇಶಕ್ಕೆ ಜಾತ್ಯತೀತ ನಾಗರಿಕ ಸಂಹಿತೆಯ ಅಗತ್ಯವಿದೆ. ಈಗ ಇರುವುದು ‘ಕೋಮುವಾದಿ ನಾಗರಿಕ ಸಂಹಿತೆ’ ಎಂದು ದೇಶದ ಬಹುತೇಕ ಜನರು ನಂಬಿದ್ದಾರೆ. ಅದು ನಿಜವೂ ಆಗಿದೆ. ಏಕೆಂದರೆ ಈಗಿನ ಕಾಯ್ದೆಗಳು ಜನರ ನಡುವೆ ತಾರತಮ್ಯ ಮಾಡುತ್ತವೆ. ಇವು ಮತೀಯ ಆಧಾರದಲ್ಲಿ ದೇಶವನ್ನು ವಿಭಜಿಸುತ್ತಿವೆ.ಹೀಗಾಗಿ ಸಮಾಜದಲ್ಲಿ ಅಸಮಾನತೆ ತಲೆದೋರಲು ಕಾರಣವಾಗುತ್ತಿವೆ. ಆಧುನಿಕ ಸಮಾಜದಲ್ಲಿ ಇದಕ್ಕೆ ಸ್ಥಾನವಿಲ್ಲ’ ಎಂದು ತೀಕ್ಷ್ಮವಾಗಿ ಹೇಳಿದರು

   

Related Articles

error: Content is protected !!