ಹೊಸದಿಲ್ಲಿ: ಭಾರತವು ಜಗತ್ತಿನ ಉತ್ಪಾದನಾ ಶಕ್ತಿ ಕೇಂದ್ರವಾಗಿ ಪರಿವರ್ತಿತವಾಗಿದೆ. ದೇಶದ ಯುವ ಶಕ್ತಿಯ ಅಪೂರ್ವ ಶಕ್ತಿ ಸಾಮರ್ಥ್ಯವು ವಿಶ್ವದ ಗಮನ ಸೆಳೆದಿದೆ ಸಹಜವಾಗಿಯೇ ಇಡೀ ಜಗತ್ತಿನ ಗಮನ ನಮ್ಮತ್ತ ನೆಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೇಕ್ ಇನ್ ಇಂಡಿಯಾ ಯೋಜನೆಗೆ ಕಳೆದ ವಾರ ಹತ್ತು ವರ್ಷ ತುಂಬಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ತಿಂಗಳ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ದೇಶದ ಯುವಶಕ್ತಿಯನ್ನು ಕೊಂಡಾಡಿದರು.
ಮನ್ ಕೀ ಬಾತ್ ಯಶಸ್ಸಿಗೆ ದೇಶದ ಭಾರೀ ಉದ್ದಿಮೆಗಳು ಹಾಗೂ ಸಣ್ಣ ಪುಟ್ಟ ವ್ಯಾಪಾರಿಗಳ ಕೊಡುಗೆ ಅಪಾರ ಎಂದು ಪ್ರಶಂಸಿಸಿದರು. ಬಡವರು, ಮಧ್ಯಮವರ್ಗ ಹಾಗೂ ಎಂಎಸ್ಎಂಇಗಳ ಸಹಿತ ಸಮಾಜದ ಪ್ರತಿಯೊಂದು ವರ್ಗಕ್ಕೂ ತಮ್ಮ ಪ್ರತಿಭೆ ಪ್ರದರ್ಶಿಸಲು ಪ್ರಸ್ತುತ ಅಭಿಯಾನ ಮುಕ್ತ ಅವಕಾಶ ನೀಡಿರುವುದನ್ನು ಕಾಣುವಾಗ ಖುಷಿಯಾಗುತ್ತಿದೆ ಎಂದರು.
ದೇಶದ ಆಟೋಮೊಬೈಲ್ ರಂಗವಿರಲಿ, ಜವಳಿ, ನಾಗರಿಕ ವಿಮಾನಯಾನ, ಇಲೆ ಕ್ಟ್ರಾನಿಕ್ಸ್ ಅಥವಾ ರಕ್ಷಣಾ ರಂಗ ಸಹಿತ ಪ್ರತಿಯೊಂದು ಕ್ಷೇತ್ರದಲ್ಲೂ ರಫ್ತು ನಿರಂತರ ಏರುಗತಿಯಲ್ಲಿದೆ ಮತ್ತು ಇದಕ್ಕೆ ದೇಶದ ಯುವಶಕ್ತಿಯ ಪ್ರತಿಭೆ ಕಾರಣ ಎಂದು ಕೊಂಡಾಡಿದರು.