Home » ಪ್ರತಿ ಮಗುವಿಗೂ ಶಿಕ್ಷಣದ ಖಾತ್ರಿ
 

ಪ್ರತಿ ಮಗುವಿಗೂ ಶಿಕ್ಷಣದ ಖಾತ್ರಿ

ಪಿ ಎಂ ಮೋದಿ

by Kundapur Xpress
Spread the love

ಹೊಸದಿಲ್ಲಿ: ಸಮಾಜದ ಪ್ರತಿಯೊಂದು ವರ್ಗದ ಮಕ್ಕಳಿಗೂ ಶಾಲಾ ಶಿಕ್ಷಣ ಕೊಡಿಸುವ ಮಹತ್ವದ ನಿರ್ಧಾರವನ್ನು ತನ್ನ ಸರಕಾರ ಕೈಗೊಂಡಿದ್ದು ಇದರ ಅನ್ವಯ ಸುಮಾರು 85 ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ತೆರೆಯಲು ಕೇಂದ್ರ ಸಚಿವ ಸಂಪುಟ ಮಂಜೂರಾತಿ ನೀಡಿದೆ. ಸರಕಾರದ ಈ ಹೆಜ್ಜೆಯಿಂದ ಅಸಂಖ್ಯ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ ಮತ್ತು ಸಾಕಷ್ಟು ಉದ್ಯೋಗಾವಕಾಶಗಳೂ ಸೃಷ್ಟಿಯಾಗಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಸಮಾಜದ ಪ್ರತೀ ವರ್ಗದ ಮಕ್ಕಳಿಗೆ ಸರಕಾರ ಶಾಲಾ ಶಿಕ್ಷಣ ಕಲ್ಪಿಸಲಿದೆ  ದೇಶಾದ್ಯಂತ 28 ಹೊಸ ನವೋದಯ ವಿದ್ಯಾಲಯಗಳನ್ನೂ ತೆರೆಯಲು ಸರಕಾರ ಮಂಜೂರಾತಿ ನೀಡಿದೆ. ಒಂದು ಕೇಂದ್ರೀಯ ವಿದ್ಯಾಲಯದ ವಿಸ್ತರಣೆಗೆ ಸರಕಾರ ಸಮ್ಮತಿಸಿದೆ. ಸರಕಾರದ ಈ ಉಪಕ್ರಮಗಳು ನಿವಾಸಿ ಮತ್ತು ಗುಣಮಟ್ಟದ ಶಾಲಾ ಶಿಕ್ಷಣವನ್ನು ವಿಸ್ತ್ರತ ನೆಲೆಯಲ್ಲಿ ವಿಸ್ತರಿಸಲು ಪೂರಕವಾಗುವುದು ಎಂದು ಪ್ರಧಾನಿ ಎಕ್ಸ್‌ಗೆ ಹಾಕಿರುವ ಹಿಂದಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

 

Related Articles

error: Content is protected !!