ಹೊಸದಿಲ್ಲಿ : ಮುಂದಿನ ಸಿಎಂ ಬಗ್ಗೆ ಮಹಾಯುತಿ ಮೈತ್ರಿಕೂಟದಲ್ಲಿ ಅನಿಶ್ಚಿತತೆಯ ಮಧ್ಯೆ ಹಿರಿಯ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಮಂಗಳವಾರ ಸಂಜೆ ಮುಂಬೈನಲ್ಲಿ ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿಯಾಗಿ ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ.
ಸಭೆಯಲ್ಲಿ ಪ್ರಮಾಣ ವಚನ, ಬಿಜೆಪಿ ಶಾಸಕಾಂಗ ನಾಯಕನ ಆಯ್ಕೆ ಮತ್ತು ಖಾತೆಯ ಬಗ್ಗೆ ಮೂಲಭೂತ ಚರ್ಚೆ ನಡೆಯಿತು. ಕೆಲವು ನಾಯಕರು ಡಿಸೆಂಬರ್ 5 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಅವರ ಆಯ್ಕೆ ಮತ್ತು ಹೆಸರುಗಳನ್ನು ಪಕ್ಷವು ಒದಗಿಸುತ್ತದೆ. ಬುಧವಾರ ನಡೆಯಲಿರುವ ಬಿಜೆಪಿ ಸಭೆಯ ನಂತರ ಖಾತೆ ಹಂಚಿಕೆ ಮತ್ತು ಇತರ ಸರ್ಕಾರ ರಚನೆಗಳ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಶಿವಸೇನಾ ನಾಯಕರೊಬ್ಬರು ತಿಳಿಸಿದ್ದಾರೆ.
ವಿಧಾನಸಭಾ ಚುನಾವಣಾ ಫಲಿತಾಂಶಗಳು ಪ್ರಕಟವಾದ ನಂತರ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಕ್ರಮವಾಗಿ ಬಿಜೆಪಿ ಮತ್ತು ಶಿವಸೇನೆಯನ್ನು ಪ್ರತಿನಿಧಿಸುವ ಉಭಯ ನಾಯಕರ ನಡುವಿನ ಮೊದಲ ಸಭೆ ಇದಾಗಿದೆ. ಇದಕ್ಕೂ ಮುನ್ನ ಶಿಂದೆ ಆಸ್ಪತ್ರೆಗೆ ನಿಯಮಿತ ಆರೋಗ್ಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಬಳಿಕ ಡಿಸ್ಟಾರ್ಜ್ ಆಗಿದ್ದಾರೆ.