ಪ್ಯಾರಿಸ್ : ವಿಶಿಷ್ಟಚೇತನ ಆದರೆ ವಿಭಿನ್ನಸಾಮರ್ಥ್ಯವುಳ್ಳ ಪ್ರತಿಭೆಗಳು ಈ ಬಾರಿಯ ಪ್ಯಾರಾಲಿಂಪಿಕ್ಸ್ನಲ್ಲಿ ಇಡೀ ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ನಮ್ಮ ಪ್ಯಾರಾ ಅಥೀಟ್ಗಳು ನಿರೀಕ್ಷೆಗಳನ್ನು ಮೀರಿ ಪ್ರದರ್ಶನ ನೀಡಿ ಜಾಗತಿಕ ಮಟ್ಟದ ವೇದಿಕೆಯಲ್ಲಿ ದಾಖಲೆಯ 29 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿ ಹೊಸಮೈಲುಗಲ್ಲು ಮುಟ್ಟಿದೆ. ಅಂಕಪಟ್ಟಿಯಲ್ಲಿ 18ನೇ ಸ್ಥಾನ ಪಡೆದಿದೆ
ಈ ಬಾರಿಯ ಪ್ಯಾರಾಲಿಂಪಿಕ್ಸ್ನಲ್ಲಿ 29 ಪದಕಗಳಲ್ಲಿ 7 ಚಿನ್ನವಾಗಿದೆ. 2016ರಲ್ಲಿ ಕೇವಲ 4 ಪದಕಗಳನ್ನು ಗೆದ್ದುಕೊಂಡಿತ್ತು. ನಂತರ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 19 ಪದಕಗಳನ್ನು ಗೆದ್ದುಕೊಂಡಿತು. ಈ ಬಾರಿ 10 ಪದಕಗಳನ್ನು ಜಾಸ್ತಿಗೆದ್ದು ಸಂಭ್ರಮ ಹೆಚ್ಚಾಗುವಂತೆ ಮಾಡಿದ್ದಾರೆ.