ನವದೆಹಲಿ : ಭಾನುವಾರ ಸಂಸತ್ ಭವನದ ಸಂಕೀರ್ಣದಲ್ಲಿ ‘ಪ್ರೇರಣಾ ಸ್ಥಳವನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್ಅವರು ಉದ್ಘಾಟಿಸಿದರು. ದೇಶದ ಎಲ್ಲ ಮಹಾನ್ ವ್ಯಕ್ತಿಗಳ ಪ್ರತಿಮೆಗಳನ್ನು ಒಂದೇ ಸ್ಥಳದಲ್ಲಿ ಇಲ್ಲಿ ಸ್ಥಾಪಿಸಲಾಗಿದೆ.
ಇತ್ತೀಚೆಗೆ ಹಳೆಯ ಸಂಸತ್ ಭವನದಿಂದ ಹೊಸ ಭವನಕ್ಕೆ ಸಂಸತ್ತು ಸ್ಥಳಾಂತರವಾಗಿದೆ. ಸಂಸತ್ ಭವನದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಲು, ಲೋಕಸಭೆಯ ಸಚಿವಾಲಯವು ಸಂಸತ್ ಭವನದ ಸಂಕೀರ್ಣದಲ್ಲಿ ‘ಪ್ರೇರಣಾ ಸ್ಥಳವನ್ನು ನಿರ್ಮಿಸಿದೆ
ಸ್ಥಳ ಉದ್ಘಾಟಿಸಿ ಮಾತನಾಡಿದ ಧನಕರ್, ‘ಪ್ರೇರಣಾ ಸ್ಥಳ’ಕ್ಕೆ ಬರುವ ಮೂಲಕ ನಾನು ಸ್ಫೂರ್ತಿ ಪಡೆದಿದ್ದೇನೆ.ಈ ಸ್ಥಳವು ಎಲ್ಲಾ ಭಾರತೀಯರಿಗೆ ಧಾರ್ಮಿಕ ಸ್ಥಳಕ್ಕಿಂತ ಕಡಿಮೆಯಿಲ್ಲ. ಮಹಾನ್ ನಾಯಕರನ್ನು ಭೇಟಿ ಮಾಡುವುದರಿಂದ ಅದು ನಮ್ಮ ಮೇಲೆ ಪ್ರಭಾವ ಬೀರುತ್ತದೆ. ಇದರ ಸಂದರ್ಶಕರಿಗೆ ಇದು ಪ್ರೇರಕ ಮತ್ತು ಸ್ಫೂರ್ತಿದಾಯಕವಾಗಿದೆ. ಹೀಗಾಗಿಯೇ ಇದಕ್ಕೆ ಪ್ರೇರಣಾ ಸ್ಥಳ ಎಂದು ಹೆಸರಿಸಲಾಗಿದೆ ಎಂದರು