ನವದೆಹಲಿ : ಸಂಸತ್ತಿನ ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ಬ್ರೌಪದಿ ಮುರ್ಮು ಅವರು ಶುಕ್ರವಾರ ಮಾಡಿದ ಭಾಷಣವನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನೀಡಿದ ‘ಬಡಪಾಯಿ ಮಹಿಳೆ’ ಎಂಬ ಹೇಳಿಕೆ ಭಾರೀ ವಿವಾದಕ್ಕೆ ಕಾರಣ ವಾಗಿದೆ. ಅತ್ಯಂತ ಅಪರೂಪದ ಬೆಳವಣಿಗೆಯಲ್ಲಿ ಸ್ವತಃ ರಾಷ್ಟ್ರಪತಿ ಭವನವೇ, ‘ಇಂಥ ಹೇಳಿಕೆ ಕಳಪೆ ಅಭಿರುಚಿಯದ್ದು ಮತ್ತು ದುರದೃಷ್ಟಕರ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಮತ್ತೊಂದೆಡೆ, ಇದು ಬುಡಕಟ್ಟು ಸಮುದಾಯಕ್ಕೆ ಕಾಂಗ್ರೆಸ್ನ ರಾಜಪರಿವಾರ ಮಾಡಿದ ಅವಮಾನ ಎಂದು ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದಿದ್ದರೆ, ರಾಷ್ಟ್ರಪತಿ ಬಗ್ಗೆ ಸೋನಿಯಾ ಗಾಂಧಿ ಅಪಾರ ಗೌರವ ಹೊಂದಿದ್ದಾರೆ. ಸೋನಿಯಾ ಅವರ ಹೇಳಿಕೆ ಯನ್ನು ತಿರುಚಲಾಗಿದೆ ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.