Home » ಲೋಕಸಭೆ ಸದಸ್ಯರ ಪ್ರಮಾಣವಚನ
 

ಲೋಕಸಭೆ ಸದಸ್ಯರ ಪ್ರಮಾಣವಚನ

by Kundapur Xpress
Spread the love

ನವದೆಹಲಿ : 18ನೇ ಲೋಕಸಭೆಯ ಮೊದಲ ಕಲಾಪ ಸೋಮವಾರ ಆರಂಭವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟ ಸಚಿವರು, ಆಡಳಿತ ಹಾಗೂ ಪ್ರತಿಪಕ್ಷಗಳ  ಸದಸ್ಯರು ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದರು.

ಶ್ರೀರಾಮನ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ ಮೋದಿ ಅವರಿಗೆ ಹಂಗಾಮಿ ಸ್ಪೀಕರ್ ಭರ್ತೃಹರಿ ಮಹಬ್ ಪ್ರಮಾಣ ಬೋಧಿಸಿದರು. ಸಚಿವರಾದ ಅಮಿತ್ ಶಾ, ನಿತಿನ್ ಗಡ್ಕರಿ, ರಾಜನಾಥ ಸಿಂಗ್, ಧರ್ಮೇಂದ್ರ ಪ್ರಧಾನ್, ಜ್ಯೋತಿರಾದಿತ್ಯ ಸಿಂಧಿಯಾ ಅವರು ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಪ್ರಮುಖರು.

ಸಂಸ್ಕೃತ, ಕನ್ನಡ, ಹಿಂದಿ, ಡೋಗ್ರಿ, ಬಂಗಾಳಿ, ಅಸ್ವಾಮಿ, ತಮಿಳು, ತೆಲುಗು, ಗುಜರಾತಿ, ಒಡಿಯಾ- ಹೀಗೆ ಪ್ರಾದೇಶಿಕ ಭಾಷೆಗಳಲ್ಲಿ ಆಯಾ ಭಾಗದ ಸಂಸದರು ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು. ದಿ. ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್, ಕಾರವಾರದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸ್ಕೃತದಲ್ಲಿ ಶಪಥ ಸ್ವೀಕರಿಸಿ ಗಮನ ಸೆಳೆದರು. ಸಚಿವರಾದ ಪ್ರಹ್ಲಾದ ಜೋಶಿ, ಎಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ ಸೇರಿದಂತೆ ಕರ್ನಾಟಕದ ಬಹುತೇಕ ಸಂಸದರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷ.

ಒಟ್ಟು 22 ಭಾಷೆಗಳಲ್ಲಿ ಶಪಥ ಸ್ವೀಕಾರಕ್ಕೆ ಅವಕಾಶವಿದೆ. ಆದರೆ ಭೋಜಪುರಿಗೆ ಅವಕಾಶ ಇಲ್ಲದ ಕಾರಣ ಆ ಭಾಷೆಯಲ್ಲಿ ಬಿಜೆಪಿ ಸಂಸದ ರಾಜೀವ್ ಪ್ರತಾಪ್ ರೂಡಿಗೆ ಶಪಥಕ್ಕೆ ಅವಕಾಶ ಸಿಗಲಿಲ್ಲ.

   

Related Articles

error: Content is protected !!