Home » ರಾಹುಲ್‌ ಹೇಳಿಕೆ : ಇಡೀ ದೇಶಕ್ಕೇ ನೋವಾಗಿದೆ
 

ರಾಹುಲ್‌ ಹೇಳಿಕೆ : ಇಡೀ ದೇಶಕ್ಕೇ ನೋವಾಗಿದೆ

ಅಶ್ವಿನಿ ವೈಷ್ಣವ್

by Kundapur Xpress
Spread the love

ಹೊಸದೆಹಲಿ : ಸದನದ ಒಳಗಷ್ಟೇ ಅಲ್ಲ, ಹೊರಗೂ ಬಿಜೆಪಿ ರಾಹುಲ್ ಗಾಂಧಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ರಾಹುಲ್ ಅವರು ಇಡೀ ಹಿಂದೂ ಸಮುದಾಯವನ್ನೇ ಹಿಂಸಾತ್ಮಕ ಮತ್ತು ಅಸತ್ಯವೆಂದು ಕರೆದಿದ್ದಾರೆ. ಹಿಂದೂ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಈ ಮೂಲಕ ಪ್ರತಿಪಕ್ಷ ನಾಯಕನ ಸ್ಥಾನಕ್ಕೇ ಅಗೌರವ ತಂದಿದ್ದಾರೆ ಎಂದಿದ್ದಾರೆ. ರಾಹುಲ್ ಅವರ ಹೇಳಿಕೆಯಿಂದಾಗಿ ಇಡೀ ದೇಶಕ್ಕೇ ನೋವಾಗಿದೆ. ಈ ಹೇಳಿಕೆಯನ್ನು ಖಂಡಿಸಿದರೆ ಅಷ್ಟೇ ಸಾಲದು ಎಂದಿದ್ದಾರೆ. ಹಿಂದೂಗಳನ್ನು ಹಿಂಸಾವಾದಿಗಳು, ಸುಳ್ಳುಗಾರರು ಎಂದು ಕರೆಯುವುದರ ಜತೆಗೆ, ಸಂಸತ್ತಿನ ಚರ್ಚೆಯಲ್ಲಿ ಹಿಂದೂ ದೇವರುಗಳನ್ನೂ ಪ್ರದರ್ಶಿಸಿದ್ದಾರೆ. ಇದರಲ್ಲೂ ಅವರು ರಾಜಕೀಯ ಮಾಡಿದ್ದಾರೆ. ಈ ಮಟ್ಟದ ಚರ್ಚೆ ಪ್ರತಿಪಕ್ಷ ನಾಯಕನಿಗೆ ಶೋಭೆ ತರದು ಎಂದೂ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

   

Related Articles

error: Content is protected !!