Home » ಭಾರತಕ್ಕೆ ಫಿಲಿಪೀನ್ಸ್ ಅಧ್ಯಕ್ಷ ಫರ್ಡಿನ್ಯಾಂಡ್
 

ಭಾರತಕ್ಕೆ ಫಿಲಿಪೀನ್ಸ್ ಅಧ್ಯಕ್ಷ ಫರ್ಡಿನ್ಯಾಂಡ್

by Kundapur Xpress
Spread the love

ಹೊಸದಿಲ್ಲಿ : ಫಿಲಿಪೀನ್ಸ್ ಅಧ್ಯಕ್ಷ ಫರ್ಡಿನ್ಯಾಂಡ್ ಮಾರ್ಕೋಸ್ ಸೋಮವಾರ ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅವರನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾದ ಪಬಿತ್ರ ಮಾರ್ಗರಿಟಾ ಮತ್ತು ಹಿರಿಯ ಅಧಿಕಾರಿಗಳು ಸ್ವಾಗತಿಸಿದರು. ಅವರೊಂದಿಗೆ ಫಿಲಿಪೀನ್ಸ್ ಪ್ರಥಮ ಮಹಿಳೆ ಮೇಡಮ್ ಲೂಯಿಸ್ ಅರನೆಟಾ ಮಾರ್ಕೋಸ್ ಇದ್ದಾರೆ.

ತಮ್ಮ ಭೇಟಿ ವೇಳೆ, ಅವರು ಪ್ರಧಾನಿ ಮೋದಿ, ರಾಷ್ಟ್ರಪತಿ ಬ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ . ಆಗಸ್ಟ್ 8 ರಂದು ತಮ್ಮ ದೇಶಕ್ಕೆ ಮರಳುವ ಮೊದಲು ಬೆಂಗಳೂರಿಗೆ ಆಗಮಿಸಲಿದ್ದಾರೆ. ಭಾರತದಂತೆಯೇ, ಫಿಲಿಪ್ಪಿನ್ಸ್ ಕೂಡ ಚೀನಾದೊಂದಿಗೆ, ವಿಶೇಷವಾಗಿ ದಕ್ಷಿಣ ಚೀನಾ ಸಮುದ್ರದಲ್ಲಿ ಪ್ರಾದೇಶಿಕ ವಿವಾದಗಳನ್ನು ಹೊಂದಿದೆ

ಫಿಲಿಪ್ಪಿನ್ಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಅಧ್ಯಕ್ಷ ಮಾರ್ಕೋಸ್ ಅವರ ಮೊದಲ ಭಾರತ ಭೇಟಿಯಾಗಿದೆ. ಭೇಟಿಯ ಸಮಯದಲ್ಲಿ, ಪ್ರಧಾನಿ ಮತ್ತು ಅಧ್ಯಕ್ಷ ಮಾರ್ಕೋಸ್ ಅವರು ಮಂಗಳವಾರ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಲಿದ್ದಾರೆ.

 

Related Articles

error: Content is protected !!