ವಾಶಿಮ್ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 18ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಬಿಡುಗಡೆ ಮಾಡಿದರು. ಇದರಿಂದ ರಾಷ್ಟ್ರವ್ಯಾಪಿ 9.4 ಕೋಟಿಗೂ ಹೆಚ್ಚು ರೈತರು ಮಧ್ಯವರ್ತಿಗಳ ಸಹಭಾಗಿತ್ವವಿಲ್ಲದೆ ನೇರ ಆರ್ಥಿಕ ಪ್ರಯೋಜನಗಳನ್ನು(ಡಿಬಿಟಿ) ಪಡೆದುಕೊಂಡಿದ್ದಾರೆ.
ಕಿಸಾನ್ ಸಮ್ಮಾನ್ ಯೋಜನೆಯ 18ನೇ ಕಂತಿನಲ್ಲಿ ಡಿಬಿಟಿ ಮೂಲಕ 20 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಹಣ ರೈತರ ಖಾತೆಗೆ ಜಮೆ ಆಗಿದೆ. ರೈತರ ಆದಾಯ ವೃದ್ಧಿಸುವುದರ ಜತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಸಮೃದ್ಧಿಗೆ ಸರ್ಕಾರದ ಬದ್ಧತೆ ಅನಾವರಣಗೊಂಡಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ಅವರು, ನಮೋ ಶೇತ್ಕಾರಿ ಮಹಾಸನ್ಮಾನ್ ನಿಧಿ ಯೋಜನೆಯ 5ನೇ ಕಂತಿನಲ್ಲಿ ಮಹಾರಾಷ್ಟ್ರದ ರೈತರಿಗೆ ಸುಮಾರು 2 ಸಾವಿರ ಕೋಟಿ ರೂಪಾಯಿಗಳ ಹೆಚ್ಚುವರಿ ಯೋಜನೆಯನ್ನು ಬಿಡುಗಡೆ ಮಾಡಿದರು.
ಮಹಾರಾಸ್ಟ್ರದಲ್ಲಿ ಪ್ರಧಾನಿ ಮೋದಿ ಬಂಜಾರ ವಿರಾಸಾತ್ ಮ್ಯೂಸಿಯಂನ್ನು ಉದ್ಘಾಟಿಸಿದರು