Home » ಸಮಾಜ ವಿಭಜನೆಗೆ ಕೆಲವು ದೇಶ ವಿರೋಧಿಗಳ ಯತ್ನ
 

ಸಮಾಜ ವಿಭಜನೆಗೆ ಕೆಲವು ದೇಶ ವಿರೋಧಿಗಳ ಯತ್ನ

ಪ್ರಧಾನಿ ಮೋದಿ ಕಿಡಿ

by Kundapur Xpress
Spread the love

ಅಹಮದಾಬಾದ್ : ಕೆಲವು ‘ದೇಶವಿರೋಧಿಗಳು ತಮ್ಮ ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಜನರು ಅವರ ಉದ್ದೇಶಗಳ ಗಂಭೀರತೆಯನ್ನು ಅರ್ಥಮಾಡಿಕೊಂಡು ಅವರನ್ನು ಸೋಲಿಸಲು ಒಗ್ಗೂಡಬೇಕಾದ ಅಗತ್ಯವಿದೆ’ ಎಂದು ಪ್ರಧಾನಿ ಮೋದಿ ಸೋಮವಾರ ಒತ್ತಿ ಹೇಳಿದ್ದಾರೆ.

ಗುಜರಾತ್‌ನ ವಡ್ತಲ್ ಪಟ್ಟಣದ ಶ್ರೀ ಸ್ವಾಮಿನಾರಾಯಣ ದೇವಸ್ಥಾನದ 200 ನೇ ವಾರ್ಷಿಕೋತ್ಸವದಂದು ಭಕ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, 2047ಕ್ಕೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರ ಮಾಡಲು ನಾಗರಿಕರ ನಡುವಿನ ಏಕತೆ ಮತ್ತು ರಾಷ್ಟ್ರದ ಸಮಗ್ರತೆ ಮುಖ್ಯವಾಗಿದೆ. ಆದರೆ ದುರದೃಷ್ಟವಶಾತ್ ಕೆಲ ಹಿತಾಸಕ್ತಿಗಳು ಸಂಕುಚಿತ ಮನೋಭಾವದ ಮೂಲಕ ನಮ್ಮ ಸಮಾಜವನ್ನು ಜಾತಿ, ಧಾರ್ಮಿಕ ಭಾಷಾವಾರು, ಪುರುಷ-ಮಹಿಳೆ, ಗ್ರಾಮ-ನಗರದ ರೇಖೆಗಳ ಮೇಲೆ ವಿಭಜಿಸಲು ಯತ್ನಿಸುತ್ತಿದ್ದಾರೆ ಎಂದರು.

‘ನಾವು ದೇಶವಿರೋಧಿಗಳ ಉದ್ದೇಶಗಳ ಗಂಭೀರತೆ ಅರ್ಥಮಾಡಿಕೊ ಳ್ಳಬೇಕು ಮತ್ತು ಅವರನ್ನು ಸೋಲಿಸಲು ಒಂದಾಗಬೇಕು. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಮೊದಲ ಪ್ರಮುಖ ಹೆಜ್ಜೆ ಆತ್ಮನಿರ್ಭರತೆ  ಎಂದು ಮೋದಿ ಹೇಳಿದರು.

‘ಇಂದು ನಾನು ಭೇಟಿಯಾಗುವ ಬಹುತೇಕ ವಿಶ್ವ ನಾಯಕರುಭಾರತೀಯ ಯುವಕರುತಮ್ಮ ದೇಶಗಳಿಗೆ ಬಂದು ಕೆಲಸ ಮಾಡಬೇಕು ಎಂಬ ಬಯಕೆ ವ್ಯಕ್ತಪಡಿಸಿದ್ದಾರೆ. ನಮ್ಮ ಯುವಕರು ಭಾರತ ಮತ್ತು ಪ್ರಪಂಚದ ಅಗತ್ಯಗಳನ್ನು ಪೂರೈಸಲು ಸಮರ್ಥರಾಗಿದ್ದಾರೆ ಎಂದು ಪ್ರಧಾನಿ ಹೆಮ್ಮೆಯಿಂದ ನುಡಿದರು.

   

Related Articles

error: Content is protected !!