ನವದೆಹಲಿ : ದೆಹಲಿಯ ಸಿಆರ್‌ಪಿಎಫ್ ಶಾಲೆಯ ಬಳಿ ಭಾನುವಾರ ನಡೆದ ಸ್ಫೋಟದಲ್ಲಿ ಖಲಿಸ್ತಾನಿ ಉಗ್ರರು ಅಥವಾ ಜೈಲು ಪಾಲಾ ಗಿರುವ ಲಾರೆನ್ಸ್ ಬಿಷ್ಟೋಯಿ ತಂಡದ ಕೈವಾಡವಿರುವ ಬಗ್ಗೆ ದೆಹಲಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇದರ ನಡುವೆಯೇ ಈ ಸ್ಫೋಟದ ಹೊಣೆಯನ್ನು ಪಾಕಿಸ್ನಾನ ಮೂಲದಲ ಶ್ವರ್-ಇ-ತೈಬಾ ಸಂಘಟನೆಯ ಭಾಗವಾದ ದಿ ರೆಸಿಸ್ಟೆನ್ಸ್ ಫ್ರಂಟ್ ಹೊತ್ತುಕೊಂಡಿದೆ. ಹೀಗಾಗಿ ಹಲವು ಆಯಾಮಗಳಿಂದ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸ್ಫೋಟದ ದೃಶ್ಯಗಳನ್ನು ಖಲಿಸ್ತಾನ್ ಜಿಂದಾಬಾದ್ ಎಂಬ ಬರಹದೊಂದಿಗೆ ‘ಜಸ್ಟಿಸ್ ಲೀಗ್ ಇಂಡಿಯಾ’ ಎಂಬ ಖಾತೆಯಿಂದ ಟೆಲಿಗ್ರಾಂನಲ್ಲಿ ಹಂಚಿಕೊಳ್ಳ ಲಾಗಿದ್ದು, ಖಲಿಸ್ತಾನಿ ಬೆಂಬಲಿಗರ ಮೇಲೆ ನಡೆಯುತ್ತಿರುವ ದಾಳಿಗೆ ಪ್ರತಿಯಾಗಿ ಸ್ಪೋಟ ನಡೆಸಿರುವುದಾಗಿ ಬರೆಯಲಾಗಿತ್ತು. ಈ ಖಾತೆಯ ಸೃಷ್ಟಿಕರ್ತರ ಕುರಿತ ಮಾಹಿತಿ ಕೋರಿ ಪೊಲೀಸರು ಟೆಲಿಗ್ರಾಂಗೆ ಪತ್ರ ಬರೆದಿದ್ದಾರೆ. ಅಂತೆಯೇ, ಪೊಲೀಸರು ಸ್ಫೋಟದ ಹಿಂದಿನ ರಾತ್ರಿ ಬಿಳಿ ಟಿ-ಶರ್ಟ್ ತೊಟ್ಟ ಶಂಕಿತನನ್ನು ಗುರುತಿಸಿದ್ದಾರೆ