66
ಬಾಲ್‌ಸೋರ್ : ಒಡಿಶಾ ಕರಾವಳಿಯ ಡಾ. ಅಬ್ದುಲ್ ಕಲಾಂ ದ್ವೀಪದಿಂದ ನಡೆಸಲಾದ ಪ್ರಳಯ ಕ್ಷಿಪಣಿಗಳ ಸತತ ಎರಡು ಹಾರಾಟ ಪ್ರಯೋಗಗಳು ಯಶಸ್ವಿಯಾಗಿವೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಮಂಗಳವಾರ ತಿಳಿಸಿದೆ. ಕ್ಷಿಪಣಿಗಳು ಉದ್ದೇಶಿತ ಪಥವನ್ನು ನಿಖರವಾಗಿ ಅನುಸರಿಸಿ ಗುರಿ ತಲುಪಿವೆ. ಕ್ಷಿಪಣಿ ವ್ಯವಸ್ಥೆಯ ಗರಿಷ್ಠ ಮತ್ತು ಕನಿಷ್ಠ ಶ್ರೇಣಿಯ ಮೌಲೀಕರಿಸಲು ಸಾಮರ್ಥ್ಯವನ್ನು ಬಳಕೆದಾರರ ಮೌಲ್ಯಮಾಪನ ಪ್ರಯೋಗಗಳ ಭಾಗವಾಗಿ 2025ರ ಜುಲೈ 28 ಮತ್ತು 29ರಂದು ಪ್ರಳಯ್ ಕ್ಷಿಪಣಿಯ ಸತತ ಎರಡು ಹಾರಾಟ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ಡಿಆ ರ್‌ಡಿಒ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಎರಡನೇ ಕ್ಷಿಪಣಿಯನ್ನು ಮಂಗಳವಾರ ‘ಬೆಳಗ್ಗೆ 9.35ರ ಸುಮಾರಿಗೆ ಮೊಬೈಲ್ ಲಾಂಚ್ ನಿಂದ ಪರೀಕ್ಷಿಸಲಾಯಿತು ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಕ್ಷಿಪಣಿಯು ಅಪೇಕ್ಷಿತ ಅರೆ-ಬ್ಯಾಲಿಸ್ಟಿಕ್ ಪಥವನ್ನು ಅನುಸರಿಸಿತು. ತೀವ್ರ ನಿಖರತೆಯೊಂದಿಗೆ ಗೊತ್ತುಪಡಿಸಿದ ಗುರಿ ತಲುಪಿತು

