Home » ಭಾರತಕ್ಕೆ ಬೈಡನ್‌ ಸರಕಾರ ನೀಡಿದ್ದು ಕಿಕ್ ಬ್ಯಾಕ್
 

ಭಾರತಕ್ಕೆ ಬೈಡನ್‌ ಸರಕಾರ ನೀಡಿದ್ದು ಕಿಕ್ ಬ್ಯಾಕ್

ಟ್ರಂಪ್‌ ಸ್ಪೋಟಕ ಆರೋಪ

by Kundapur Xpress
Spread the love

ವಾಷಿಂಗ್ಟನ್ : 180 ಕೋಟಿ ರು. ನಿಧಿ ಮೂಲಕ ಭಾರತದ ಚುನಾವಣೆಗಳ ಮೇಲೆ ಈ ಹಿಂದಿನ ಸರ್ಕಾರ ಪ್ರಭಾವ ಬೀರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಯತ್ನಿಸಿತ್ತು’ ಎಂದು ಸ್ಪೋಟಕ ಆರೋಪ ಮಾಡಿದ ಮರು ದಿನವೂ ವಾಗ್ದಾಳಿ ಮುಂದುವರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಇದು ಕಿಕ್‌ ಬ್ಯಾಕ್ ಸ್ಕೀಂ (ಲಂಚದ ಯೋಜನೆ) ಅಲ್ಲದೆ, ‘ಏನು ನಡೆ ‘ಯುತ್ತಿದೆ ಎಂಬುದರ ಬಗ್ಗೆ ಯಾರಿಗೂ ತಿಳಿದಿರಲಿಲ್ಲ ಎಂದಿದ್ದಾರೆ.

ವಾಷಿಂಗ್ಟನ್‌ನಲ್ಲಿ ರಿಪಬ್ಲಿಕನ್ ಗವರ್ನರ್ ಅಸೋಸಿಯೇಷನ್ ಸಭೆಯಲ್ಲಿ ಗುರುವಾರ ಮಾತನಾಡಿದ ಟ್ರಂಪ್, ಭಾರತದಲ್ಲಿ ಮತದಾನ ವ್ಯವಸ್ಥೆ ಸುಧಾರಣೆಗೆ ಅಮೆರಿಕ 180 ಕೋಟಿ ರು. ನೀಡಿತ್ತು. ಆ ಹಣ ನೀಡುವವರು ಜನರತ್ತ ಆ ಹಣವನ್ನು ‘ಕಿಕ್’ ಮಾಡುತ್ತಿದ್ದರು.ನಂತರತಮಗೆಬೇಕಾದುದನ್ನು “ವಾಪಸ್’ (ಬ್ಯಾಕ್) ಪಡೆಯುತ್ತಿದ್ದರು. ಹೀಗಾಗಿ ಇದೊಂದು ಕಿಕ್ ಬ್ಯಾಕ್ ಯೋಜನೆ. ಆದರೆ ನಿಜವಾಗಿ ಏನು ನಡೆಯುತ್ತಿದೆ ಎಂದು ಯಾರಿಗೂ ಬಹಿರಂಗವಾಗಿ ಗೊತ್ತಾಗುತ್ತಿರಲಿಲ್ಲ’ ಎಂದರು. ‘ಆ ಎಲ್ಲಾ ಹಣ ಭಾರತಕ್ಕೆ ಹೋದಾಗ ಅವರು’ (ಬೈಡೆನ್ ಸರ್ಕಾರ) ಅದನ್ನು ಯಾವ ಉದ್ದೇಶಕ್ಕೆ ಬಳಕೆ ಮಾಡಬೇಕು ಎಂದು ಯೋಚಿಸುತ್ತಿದ್ದರು ಎಂಬ ವಿಚಾರ ತಿಳಿದು ಅಚ್ಚರಿ ಆಗುತ್ತದೆ ಎಂದರು.

 

Related Articles

error: Content is protected !!