ನವದೆಹಲಿ : ಇತ್ತೀಚೆಗೆ ಬಿಜೆಪಿ ಅಂದುಕೊಂಡಿದ್ದ 400 ಸ್ಥಾನ ಹೋಗಲಿ ಕನಿಷ್ಠ ಬಹುಮತದ 272 ಸ್ಥಾನದ ಗುರಿಯನ್ನೂ ದಾಟದೆ 240 ಸ್ಥಾನ ಪಡೆದ ಬಗ್ಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಹಾಗೂ ಆರೆಸ್ಸೆಸ್ ಸಂಬಂಧಿ ನಿಯತಕಾಲಿಕೆ ‘ಆರ್ಗನೈಸರ್’ ನಲ್ಲಿ ಚಾಟಿ ಬೀಸಲಾಗಿದೆ. ಸಮಾರಂಭವೊಂದರಲ್ಲಿ ಮಾತನಾಡಿದ ಮೋಹನ್ ಭಾಗವತ್ ‘ನಿಜವಾದ ಕಾರ್ಯಕರ್ತರು ಎಂದೂ ಅಹಂಕಾರಿ ಆಗಿರುವುದಿಲ್ಲ. ಚುನಾವಣಾ ಪ್ರಚಾರದ ವೇಳೆ ಶಿಸ್ತು ಕಾಪಾಡಲಿಲ್ಲ ಚುನಾವಣೆಯನ್ನು ನಾವು ಸ್ಪರ್ಧೆ ರೀತಿ ನೋಡಬೇಕೇ ವಿನಃ ಯುದ್ಧದ ರೀತಿಯಲ್ಲಲ್ಲ’ ಎಂದು ಕಿವಿಮಾತು ಹೇಳಿದ್ದಾರೆ.
ಆರೆಸ್ಸೆಸ್ ಹೇಳಿದ್ದೇನು?
ಚುನಾವಣೆಯ ನಂತರ ಬಿಜೆಪಿಗರು ಒಡೆದು ಹೋಗುವ ಗುಳ್ಳೆ ರೀತಿ ಸಂಭ್ರಮಿಸುತ್ತಿದ್ದಾರೆ
ಮೋದಿಯವರ ಪ್ರಭೆಯ ಹೊಳಪಿನಲ್ಲಿ ಕೆಲವರು ಆನಂದಿಸಿದರು, ಆದರೆ ಸ್ವತಃ ಕೆಲಸ ಮಾಡಲಿಲ್ಲ
ಬಿಜೆಪಿಗರು ಪಕ್ಷದ ಹಳೆಯ ಕಾರ್ಯಕರ್ತರನ್ನು ಮರೆತು, ಸೆಲ್ಪಿ ಪ್ರಿಯರನ್ನು ಅವಲಂಬಿಸಿದರು
ಲೋಕಸಭೆ ಚುನಾವಣೆಯಲ್ಲಿ 400 ಸ್ಥಾನ ಗೆಲ್ಲಲು ದೇಶದ ಓಣಿ ಓಣಿಗಳಲ್ಲಿ ಓಡಾಡಿ ಶ್ರಮ ಪಡಬೇಕು
ಕೇವಲ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಿಂದ ಚುನಾವಣೆಗಳನ್ನು ಗೆಲ್ಲಲು ಸಾಧ್ಯವಿಲ್ಲ