Home » ಪರಿವರ್ತನೆ ಬಗ್ಗೆ ಭಾಗವತ್ ಮಾರ್ಗದರ್ಶನ
 

ಪರಿವರ್ತನೆ ಬಗ್ಗೆ ಭಾಗವತ್ ಮಾರ್ಗದರ್ಶನ

ಆರ್‌ಎಸ್‌ಎಸ್‌-100 ವರ್ಷ

by Kundapur Xpress
Spread the love

ಮಂಗಳೂರು : ಕಳೆದ ಐದು ದಿನಗಳ ದ.ಕ. ಪ್ರವಾಸದಲ್ಲಿರುವ ಆರ್‌ಎಸ್ಎಸ್ ಸರಸಂಘಚಾಲಕ ಡಾ.ಮೋಹನ ಭಾಗವತ್ ಅವರು ಮಂಗಳವಾರ ಮಂಗಳೂರಿನ ಸಂಘನಿಕೇತನದಲ್ಲಿ ಪ್ರಾಂತ ಪ್ರಚಾರಕರ ಬೈಠಕ್‌ ನಡೆಸಿದರು.

ಆರ್‌ಎಸ್‌ಎಸ್‌ಗೆ 100 ವರ್ಷ ಹಿನ್ನೆಲೆಯಲ್ಲಿ ಪರಿವರ್ತನೆ ಕುರಿತು ಮಾರ್ಗದರ್ಶನ ಮಾಡಿದ್ದಾರೆ. ಸಾಮರಸ್ಯ, ಕುಟುಂಬ ಪ್ರಬೋಧನ, ಪರ್ಯಾವರಣ (ಪರಿಸರ), ನಾಗರಿಕ ಕರ್ತವ್ಯ ಹಾಗೂ ಸ್ವದೇಶಿ ಚಿಂತನೆಗಳಿಗೆ ಒತ್ತು ನೀಡುವ ದಿಶೆಯಲ್ಲಿ ಚಿಂತನ ಮಂಥನ ನಡೆಸಿದರು

2025 ಅಕ್ಟೋಬರ್‌ನಿಂದ 2026ರ ವರೆಗೆ ಒಂದು ವರ್ಷ ಕಾಲ ನಡೆಯುವ ಸಂಘದ ಶತಾಬ್ಬಿ ಆಚರಣೆಗೆ ಸಂಬಂಧಿಸಿ ನಡೆಸಬೇಕಾದ ಕಾರ್ಯಕ್ರಮಗಳ ಬಗ್ಗೆ ಮಾರ್ಗದರ್ಶನ ಮಾಡಿದರು. ಅಲ್ಲದೆ ಶಾಖಾ ವಿಸ್ತರಣೆ ಬಗ್ಗೆ ಒತ್ತು ನೀಡುವಂತೆ ಸರಸಂಘಚಾಲಕರು ಸೂಚನೆ ನೀಡಿದರು.

ಸರಸಂಘಚಾಲಕರ ಐದು ದಿನಗಳ ಭೇಟಿಯಲ್ಲಿ ಕಲ್ಲಡ್ಕ ಕ್ರೀಡೋತ್ಸವ ಹೊರತುಪಡಿಸಿ ಬೇರೆ ಎಲ್ಲ ಕಾರ್ಯಕ್ರಮಗಳು ಸಂಘನಿಕೇತನದೊಳಗೆ ಆಂತರಿಕವಾಗಿ ನಡೆಯಿತು. ಆರ್‌ಎಸ್‌ಎಸ್ ಶಾಖೆ ಭೇಟಿ, ಸ್ವಯಂಸೇವಕರ ಭೇಟಿ, ಬೌದ್ಧಿಕ್ ವರ್ಗ, ಪ್ರಚಾರಕರ ಬೈಠಕ್, ಪ್ರಾಂತ ಪ್ರಚಾರಕರ ಬೈಠಕ್, ಸಂಘನಿಕೇತನದ ನೂತನ ಕಟ್ಟಡ ಉದ್ಘಾಟನೆ ಎಲ್ಲವೂ ಆಂತರಿಕವಾಗಿಯೇ ನಡೆಯಿತು. ಈ ಮಧ್ಯೆ ಉಡುಪಿ ಶ್ರೀಕೃಷ್ಣ ಮಠ ಭೇಟಿ, ಪರ್ಯಾಯ ಪುತ್ತಿಗೆಶ್ರೀಗಳ ಆಶೀರ್ವಾದ ಪಡೆದಿರುವುದು ಗಮನಾರ್ಹ

 

Related Articles

error: Content is protected !!