ಮಧ್ಯ ಪ್ರದೇಶ : ಭದ್ರತೆಯ ವಿಷಯದಲ್ಲಿ ಭಾರತ ಹೆಚ್ಚು ಅದೃಷ್ಟಶಾಲಿ ರಾಷ್ಟ್ರವಲ್ಲ, ಕಾರಣ ಯಾವಾಗಲೂ ಸಕ್ರಿಯವಾಗಿರುವ ಆಂತರಿಕ ಮತ್ತು ಬಾಹ್ಯ ವೈರಿಗಳ ಮೇಲೆ ನಿಗಾ ಇಡುವಂತೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಸೈನಿಕರಿಗೆ ಸೂಚಿಸಿದರು. ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಎರಡು ಶತಮಾನಕ್ಕೂ ಹಳೆಯದಾದ ಮಹೂ ಕಂಟೋನ್ವೆಂಟ್ ನಲ್ಲಿ ಸೇನಾ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವರು, ಭಾರತ ಆಂತರಿಕವಾಗಿಯೂ ಸವಾಲುಗಳನ್ನು ಎದುರಿಸುತ್ತಿದೆ. ಇದರ ಹಿನ್ನೆಲೆಯಲ್ಲಿ ನಾವು ಮೌನವಾಗಿ ಚಿಂತೆಯಿಲ್ಲದೆ ಕುಳಿತುಕೊಳ್ಳಲು ಸಾಧ್ಯವಿಲ್ಲ, ಶತ್ರುಗಳು, ಆಂತರಿಕವಾಗಿರಲಿ ಅಥವಾ ಬಾಹ್ಯವಾಗಿರಲಿ, ಯಾವಾಗಲೂ ಸಕ್ರಿಯರಾಗಿರುತ್ತಾರೆ. ಅವರ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಡಬೇಕು ಮತ್ತು ಸೂಕ್ತ ಮತ್ತು ಸಮಯೋಚಿತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಸೈನಿಕರಿಗೆ ಹೇಳಿದರು.
2022ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ದೇಶವನ್ನಾಗಿ ಮಾಡಲು, ಸೇನೆಯ ಪಾತ್ರ ಬಹಳ ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು.