Home » ಅಕ್ರಮ ಮತಾಂತರ : 10 ಜನರ ಬಂಧನ
 

ಅಕ್ರಮ ಮತಾಂತರ : 10 ಜನರ ಬಂಧನ

by Kundapur Xpress
Spread the love

ಲಖನೌ : ಗಲ್ಫ್ ರಾಷ್ಟ್ರಗಳಿಂದ ಹಣ ಪಡೆದು ಸಾವಿರಾರು ಜನರನ್ನು ಇಸ್ಲಾಂಗೆ ಮತಾಂತರಿಸಿದ್ದ ಛಂಗುರ್ ಬಾಬಾ ಬಂಧನದ ಬೆನ್ನಲ್ಲೇ, ಉತ್ತರಪ್ರದೇಶ ಪೊಲೀಸರು ಅಕ್ರಮ ಮತಾಂತರದಲ್ಲಿ ತೊಡಗಿದ್ದ ಜಾಲವೊಂದನ್ನು ಭೇದಿಸಿ 6 ರಾಜ್ಯಗಳಲ್ಲಿ 10 ಜನರನ್ನು ಬಂಧಿಸಿದ್ದಾರೆ.

ಬಂಧಿತರು ಅಕ್ರಮ ಹಣ ವ್ಯವಹಾರ, ರಹಸ್ಯ ಕಾರ್ಯಾಚರಣೆಗಳಿಗೆ ಸುರಕ್ಷಿತ ಮನೆ ಒದಗಿಸುವುದು, ಕಾನೂನು ಸಲಹೆ ನೀಡುವುದು ಸೇರಿದಂತೆ ಹಲವು ಕೆಲಸಗಳನ್ನು ಮಾಡುತ್ತಿದ್ದರು. ಹಲವರನ್ನು ಲವ್ ಜಿಹಾದ್ ಜಾಲಕ್ಕೆ ಸಿಲುಕಿಸಿದ್ದರು. ಇದಕ್ಕೆ ಅಮೆರಿಕ ಮತ್ತು ಕೆನಡಾದಿಂದ ಹಣ ಹರಿದು ಬರುತ್ತಿತ್ತು. ಇವರ ಹಿಂದೆ ಐಸಿಸ್ ಕೂಡ ಇತ್ತು. ಎಂದು ಗೊತ್ತಾಗಿದೆ. ಬಂಧಿತರು ರಾಜಸ್ಥಾನ, ಉ.ಪ್ರದೇಶ, ಬಂಗಾಳ ಗೋವಾ, ಉತ್ತರಾಖಂಡ ಹಾಗೂ ದೆಹಲಿಯವರು.

 

Related Articles

error: Content is protected !!