ಬೆಂಗಳೂರು : ಮಾದಕವಸ್ತು ಮಾರಾಟ ಜಾಲದ ಮೇಲೆ ಕಾರ್ಯಾಚರಣೆ ನಡೆಸಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ), ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 40 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದೆ.
ಕೆಲ ತಿಂಗಳ ಹಿಂದೆ ದುಬೈನಿಂದ ಚಿನ್ನ ಕಳ್ಳಸಾಗಣೆ ಪ್ರಕರಣ ಪತ್ತೆ ಮಾಡಿದ್ದ ಡಿಆರ್‌ಐ, ಈಗ ದೋಹಾದಿಂದ ಅಕ್ರಮವಾಗಿ ನಗರಕ್ಕೆ ಡ್ರಗ್ಸ್ ಸಾಗಾಣಿಕೆ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಓರ್ವ ಭಾರತೀಯ ಪ್ರಜೆ ಬಂದಿಳಿದ ಕೂಡಲೇ ಮಾಲಿನ ಸಮೇತ ಬಂಧಿಸಿದೆ. ಈತನ ಬಳಿ 40 ಕೋಟಿ ರು. ಮೌಲ್ಯದ 4 ಕೆಜಿ ಕೊಕೇನ್ ಪತ್ತೆಯಾಗಿದೆ.
ಕಾಮಿಕ್ಸ್, ನಿಯತಕಾಲಿಕೆಗಳಲ್ಲಿ ಡ್ರಗ್ಸ್ :
ಮಕ್ಕಳು ಓದುವ ಕಾಮಿಕ್ಸ್ ಪುಸ್ತಕ ಹಾಗೂ ನಿಯತಕಾಲಿಕೆಗಳಲ್ಲಿ ಕೊಕೇನ್ ಅನ್ನು ಪೌಡರ್ ರೀತಿ ಪುಡಿ ಪುಡಿ ಮಾಡಿ ಪೆಡ್ಡರ್‌ತುಂಬಿದ್ದ. ಸಾಮಾನ್ಯವಾಗಿ ಸೂಪರ್ ಹಿರೋಗಳ ಕಾಮಿಕ್ಸ್ ಪುಸ್ತಕ ಹಾಗೂ ಮ್ಯಾಗಜಿನ್‌ಗಳು ಹೆಚ್ಚು ಭಾರವಿರುವುದಿಲ್ಲ ಆದರೆ ಈ ಪೆಡ್ಲರ್ ಬ್ಯಾಗ್‌ನಲ್ಲಿದ್ದ ಈ ಪುಸ್ತಕ ಹಾಗೂ ಮ್ಯಾಗಜಿನ್‌ಗಳು ಕೆಜಿಗಟ್ಟಲೇ ತೂಗಿವೆ ಇದರಿಂದ ಶಂಕೆಗೊಂಡ ಅಧಿಕಾರಿಗಳು, ಕಾಮಿಕ್ಸ್ ಪುಸ್ತಕ ಹಾಗೂ ಮ್ಯಾಗಜಿನ್‌ಗಳನ್ನು ಬಿಡಿಸಿದಾಗ 40 ಕೋಟಿರು. ಮೌಲ್ಯದ ಕೊಕೇನ್ ಸಿಕ್ಕಿದೆ ಎಂದು ಡಿಆರ್‌ಐ ಮಾಹಿತಿ ನೀಡಿದೆ.

