ಮುಂಬೈ : ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಎರಡನೇ ದಿನವೂ ಕುಸಿತ ಕಂಡಿದ್ದು, ಮಂಗಳವಾರ 930 ಅಂಕ ಇಳಿದು 80,220 ಅಂಕಗಳಲ್ಲಿ ಮುಕ್ತಾಯವಾಗಿದೆ. ಮತ್ತೊಂದೆಡೆ ನಿಫ್ಟಿ ಕೂಡಾ 309 ಅಂಕ ಕುಸಿದು 24,472 ಅಂಕಗಳಲ್ಲಿ ಮುಕ್ತಾಯವಾಗಿದೆ. ಇದರೊಂದಿಗೆ ಎರಡೂ ಸೂಚ್ಯಂಕಗಳು 2 ತಿಂಗಳ ಕನಿಷ್ಠಕ್ಕೆ ತಲುಪಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೆಚ್ಚು ಷೇರುಗಳ ಮಾರಾಟಕ್ಕೆ ತೊಡಗಿದ್ದರಿಂದ ಹಾಗೂ ವಿದೇಶೀ ಪೇಟೆಗಳು ಮಂಕಾಗಿದ್ದರಿಂದ ಭಾರತದ ಪೇಟೆ ಕುಸಿದಿದೆ ಎಂದು ತಜ್ಞರು ಹೇಳಿದ್ದಾರೆ. ಮಂಗಳವಾರದ ಭಾರೀ ಕುಸಿತದ ಪರಿಣಾಮ ಒಂದೇ ದಿನ ಹೂಡಿಕೆದಾರರ ಸಂಪತ್ತು 9.19 ಲಕ್ಷ ಕೋಟಿ ರು.ನಷ್ಟು ಕರೆಗಿದೆ