171
ಹೊಸದಿಲ್ಲಿ: ಪಹಲ್ಗಾಮ್ ಉಗ್ರ ದಾಳಿ ಹಿನ್ನೆಲೆ ಭಾರತದ ಕಠಿಣ ನಿಲುವುಗಳನ್ನು ವಿರೋಧಿಸಿ ಪಾಕಿಸ್ತಾನ ಕ್ಷಿಪಣಿ ಪರೀಕ್ಷೆ ನಡೆಸಿದ್ದು, ಪ್ರತ್ಯುತ್ತರ ವಾಗಿ ಭಾರತೀಯ ನೌಕಾದಳವು ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿರುವ ಐಎನ್ಎಸ್ ವಿಕ್ರಾಂತ್ ಯುದ್ಧ ನೌಕೆಯನ್ನು ಅರಬ್ಬಿ ಸಮುದ್ರಕ್ಕಿಳಿಸಿ ಪಾಕಿಸ್ತಾನಕ್ಕೆ ದೊಡ್ಡ ದಾಳಿಯ ನಡುಕ ಹುಟ್ಟಿಸಿದೆ.
ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಉತ್ತರವಾಗಿ ಭಾರತ ಸಿಂಧೂ ನದಿ ಒಪ್ಪಂದವನ್ನು ಕೂಡಲೇ ರದ್ದು ಮಾಡುವುದರೊಂದಿಗೆ ಪಂಚ ನಿರ್ಧಾರಗಳನ್ನು ತೆಗೆದುಕೊಂಡು ಪಾಕಿಸ್ತಾನದ ಮೇಲೆ ಒತ್ತಡ ಹೇರಿತ್ತು. ಇದನ್ನು ವಿರೋಧಿಸುವಂತೆ ಗುರುವಾರ ಅರಬ್ಬಿ ಸಮುದ್ರದಲ್ಲಿ ಪಾಕ್ ಪೈರಿಂಗ್ ಡ್ರಿಲ್ ನಡೆಸಿದ್ದು, ಗಂಭೀರವಾಗಿ ಪರಿಗಣಿಸಿದ ನೌಕಾದಳ ಯುದ್ಧ ವಿಮಾನಗಳನ್ನು ಹೊರುವ ಸಾಮರ್ಥ್ಯ ಹೊಂದಿರುವ ದೈತ್ಯ ಐಎನ್‌ಎಸ್ ವಿಕ್ರಾಂತ್ ಯುದ್ಧ ನೌಕೆಯನ್ನು ಅರಬ್ಬಿ ಸಮುದ್ರಕ್ಕೆ ಇಳಿಸಿದೆ

