Home » ಪೌರತ್ವಕ್ಕೂ ಮುನ್ನ ಮತಪಟ್ಟಿಯಲ್ಲಿ ಸೋನಿಯಾ !
 

ಪೌರತ್ವಕ್ಕೂ ಮುನ್ನ ಮತಪಟ್ಟಿಯಲ್ಲಿ ಸೋನಿಯಾ !

by Kundapur Xpress
Spread the love

ಹೊಸದಿಲ್ಲಿ : ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಪೌರತ್ವ ಪಡೆಯುವ ಮೊದಲೇ ಆಕ್ರಮವಾಗಿ ಭಾರತದ ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದರು ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್ ಈ ಆರೋಪಗಳನ್ನು ತಳ್ಳಿಹಾಕಿದೆ.

1946 ರಲ್ಲಿ ಇಟಲಿಯಲ್ಲಿ ಜನಿಸಿದ ಸೋನಿಯಾ ಗಾಂಧಿ, 1983 ರಲ್ಲಿ ಭಾರತೀಯ ಪೌರತ್ವವನ್ನು ಪಡೆಯುವ ಮೊದಲು 1980 ರಿಂದ 1982 ರವರೆಗೆ ಮತದಾರರ ಪಟ್ಟಿಯಲ್ಲಿದ್ದರು ಎಂದು ಬಿಜೆಪಿ ಆರೋಪಿಸಿದೆ. ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್, 1980 ರ ಲೋಕಸಭಾ ಚುನಾವಣೆಯ ಪರಿಷ್ಕರಣೆಯ ವೇಳೆಯಲ್ಲಿ ಅವರ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಅನರ್ಹ ಮತದಾರರನ್ನು ಬೆಂಬಲಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಪೌರತ್ವ ಉಲ್ಲಂಘನೆ ಆರೋಪ :

ಬಿಜೆಪಿ ನಾಯಕ ಅಮಿತ್ ಮಾಳವೀಯ, 1980 ರ ಮತದಾರರ ಪಟ್ಟಿಯ ಫೋಟೋ ಕಾಪಿಯನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಸೋನಿಯಾ ಗಾಂಧಿ ಹೆಸರನ್ನು ಮತದಾರರ ಪಟ್ಟಿಯಲ್ಲಿ ದಾಖಲಿಸುವಿಕೆ ಮತದಾರರ ನೋಂದಣಿಗೆ ಭಾರತೀಯ ಪೌರತ್ವದ ಅಗತ್ಯವಿರುವ ಕಾನೂನನ್ನು ಉಲ್ಲಂಘಿಸಿದೆ ಎಂದು ಹೇಳಿದ್ದಾರೆ. ಸಾರ್ವಜನಿಕ ಆಕ್ರೋಶದ ನಂತರ 1982ರಲ್ಲಿ ಆಕೆಯ ಹೆಸರನ್ನು ತೆಗೆದುಹಾಕಲಾಯಿತು ಎಂದೂ ಅವರು ಹೇಳಿದ್ದಾರೆ

 

Related Articles

error: Content is protected !!