Home » ಪಾಕ್‌ ಎಜೆಂಟ್‌ಗಳ ಜೊತೆ ನಿಕಟ ಸಂಪರ್ಕ
 

ಪಾಕ್‌ ಎಜೆಂಟ್‌ಗಳ ಜೊತೆ ನಿಕಟ ಸಂಪರ್ಕ

ಹಣಕ್ಕಾಗೆ ಭಾರತದ ಸೂಕ್ಷ್ಮ ಮಾಹಿತಿ ಸೋರಿಕೆ

by Kundapur Xpress
Spread the love

ಚಂಡೀಗಢ : ಹಣಕ್ಕಾಗಿ ಭಾರತದ ಅತ್ಯಂತ ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡುತ್ತಿದ್ದ ಆರೋಪದಲ್ಲಿ ಬಂಧಿತ ಹರ್ಯಾಣ ಮೂಲದ ಯೂಟ್ಯೂಬರ್ ಜ್ಯೋತಿ ಮತ್ತೋತ್ರಾ, ಭಾರತದ ಪಾಕ್ ರಾಯಭಾರ ಕಚೇರಿಯಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದಳು. ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನವನ್ನು ನಿರಂತರ ಹೊಗಳುತ್ತಿದ್ದಳು. ಲಾಹೋರ್ ಪಾಕಿಸ್ತಾನದ ಸಾಂಸ್ಕೃತಿಕ ಹೃದಯವೆಂದು ಇನ್‌ಸ್ಟಾಗ್ರಾಂಗೆ ಹಾಕಿದ್ದ ಪೋಸ್ಟ್‌ನಲ್ಲಿ ಬಣ್ಣಿಸಿದ್ದಳು

ಪಾಕ್‌ನ ಲಾಹೋರ್ ಮತ್ತಿತರ ಪ್ರದೇಶಗಳಿಗೆ ಪ್ರವಾಸದಲ್ಲಿ ತೆರಳಿದ ಸಂದರ್ಭ ತೆಗೆದ 7 ವೀಡಿಯೊಗಳನ್ನು ತನ್ನ ಪೇಜ್‌ನಲ್ಲಿ ಈಕೆ ಹಾಕಿಕೊಂಡಿದ್ದಾಳೆ. 34ರ ಹರೆಯದ ಜ್ಯೋತಿ ಟ್ರಾವೆಲ್ ವಿದ್ ಜೋ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಬರೋಬ್ಬರಿ 3.2 ಲಕ್ಷ ಚಂದಾದಾರರನ್ನು ಹೊಂದಿದ್ದಾಳೆ. ಇನ್ ಸ್ಟಾಗ್ರಾಮ್‌ನಲ್ಲಿ ಈಕೆಗೆ ಬರೋಬ್ಬರಿ 13.4 ಲಕ್ಷ ಫಾಲೋವರ್ಸ್ ಇದ್ದಾರೆ

ಪಾಕ್ ರಾಯಭಾರ ಕಚೇರಿಯಲ್ಲಿದ್ದುಕೊಂಡು ಭಾರತದ ವಿರುದ್ದ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಭಾರತದಿಂದ ಉಚ್ಚಾಟಿಸಲ್ಪಟ್ಟಿರುವ ಪಾಕ್ ಸಿಬ್ಬಂದಿ ಜತೆ ಸಖ್ಯ ಹೊಂದಿದ್ದ ಮತ್ತು ಸದರಿ ಪ್ರಕರಣದಲ್ಲಿ ಶಾಮೀಲಾಗಿರುವ ಇನ್ನೀರ್ವರು ಆರೋಪಿಗಳನ್ನು ಮಲರ್‌ಕೋಟದಿಂದ ಪಂಜಾಬ್ ಪೊಲೀಸರು ಬಂಧಿಸಿದ ಕೆಲವು ದಿನಗಳಲ್ಲೇ ಮಹಿಳಾ ಬ್ಲಾಗರ್ ಜ್ಯೋತಿಯನ್ನು ಸೆರೆ ಹಿಡಿಯಲಾಗಿದೆ. ಆರೋಪಿ ಜ್ಯೋತಿ ಪಾಕ್ ಗುಪ್ತಚರ ಇಲಾಖೆಯ ಹಲವು ಅಧಿಕಾರಿಗಳ ಜತೆ, ಮುಖ್ಯವಾಗಿ ಪ್ರಸಕ್ತ ಉಚ್ಛಾಟಿತ ಪಾಕ್ ಹೈಕಮಿಷನ್ ಸಿಬಂದಿ ಯೆಕ್ಸಾನ್ -ಉರ್ -ರಹೀಮ್ ಯಾನೆ ಡ್ಯಾನಿಷ್ ಜತೆ ನಿಕಟ ಸಂಪರ್ಕದಲ್ಲಿದ್ದಳು ಎಂದು ತಿಳಿದು ಬಂದಿದೆ

 

Related Articles

error: Content is protected !!