Home » ಅಮೆರಿಕ ಸುಂಕ : ಷೇರುಪೇಟೆಯಲ್ಲಿ ಭಾರೀ ನಷ್ಟ
 

ಅಮೆರಿಕ ಸುಂಕ : ಷೇರುಪೇಟೆಯಲ್ಲಿ ಭಾರೀ ನಷ್ಟ

by Kundapur Xpress
Spread the love

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 60 ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ವ್ಯಾಪಕ ತೆರಿಗೆ ವಿಧಿಸಿದ ಬೆನ್ನಲ್ಲೇ ಷೇರು ಮಾರುಕಟ್ಟೆ ಸೂಚ್ಯಂಕದಲ್ಲಿ ಭಾರೀ ಕುಸಿತ ಕಂಡಿದೆ.

ಅವರ ಹೊಸ ಸುಂಕಗಳು ಜಾಗತಿಕ ವ್ಯಾಪಾರ ವ್ಯವಸ್ಥೆಯನ್ನೇ ಅಲುಗಾಡಿಸಿದೆ, ಯುಎಸ್ ಷೇರು ಮಾರುಕಟ್ಟೆಯಲ್ಲಿ 2.5 ಟ್ರಿಲಿಯನ್ ಡಾಲ‌ರ್ ನಷ್ಟಕೈ ಕಾರಣವಾಗಿದೆ ಎಂದು ಫೈನಾನ್ಸಿಯಲ್ ಟೈಮ್ಸ್ ವರದಿ ಮಾಡಿದೆ. ಟ್ರಂಪ್‌ ಭಾರೀ ಗಡಿ ತೆರಿಗೆಗಳು ಶೇ.10 ರಿಂದ 50 ರವರೆಗೆ ಜಾಗತಿಕ ಕುಸಿತ ಮತ್ತು ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಅಪಾಯ ಹೆಚ್ಚಿಸಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಬ್ರಸೆಲ್ಸ್ ನಿಂದ ಬೀಜಿಂಗ್ ವರೆಗಿನ ನಾಯಕರು ಟ್ರಂಪ್‌ನ ಈ ಕ್ರಮಗಳನ್ನು ಟೀಕಿಸಿದ್ದಾರೆ. ಚೀನಾ ಇದನ್ನು ಬೆದರಿಸುವ ನಡೆ ಎಂದು ಕರೆದರೆ, ಇಯು ಪ್ರತಿಕ್ರಮಗಳನ್ನು ಯೋಜಿಸುತ್ತಿದೆ. ಐದು ವರ್ಷಗಳ ಹಿಂದೆ ಕೊರೋನಾ ಸಾಂಕ್ರಾಮಿಕದ ವೇಳೆ ಜಾಗತಿಕ ಆರ್ಥಿಕತೆ ಕುಸಿತಗೊಳಿಸಿದ ನಂತರ ಇದೀಗ ಮೊದಲ ಬಾರಿಗೆ ಅಮೆರಿಕದ ಹಣಕಾಸು ಮಾರುಕಟ್ಟೆಗಳು ಮತ್ತಷ್ಟು ಕುಸಿತಗೊಂಡಿವೆ.

 

Related Articles

error: Content is protected !!