109
ಕೇಪ್ ಕೆನವರೆಲ್ : ಕೇವಲ 8 ದಿನಗಳ ಮಿಷನ್‌ನ ಭಾಗವಾಗಿ 2024ರ ಜೂ.5ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿ, ತಾಂತ್ರಿಕ ದೋಷಗಳಿಂದಾಗಿ ಬರೋಬ್ಬರಿ 9 ತಿಂಗಳ ಕಾಲ ಅಲ್ಲೇ ಉಳಿದಿದ್ದ ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ ಭೂಮಿಗೆ ಮರಳುವ ಸಮಯ ಕೊನೆಗೂ ಸಮೀಪಿಸಿದೆ. ಸುನಿತಾ ಮತ್ತು ಬುಚ್ ವಿಲ್ಲೋರ್ ಜಾಗಕ್ಕೆ ಇನ್ನಿಬ್ಬರು ಗಗನ ಯಾತ್ರಿಗಳು ಇದೇ ಮಾರ್ಚ್‌ನ ಅಂತ್ಯದ ವೇಳೆ ಬರಲಿದ್ದಾರೆ.
ಸ್ಪೇಸ್ ಎಕ್ಸ್‌ನ ಕ್ಯೂ 10 ನೌಕೆ ಮಾ.12ರಂದು ಭೂಮಿಯಿಂದ ಪ್ರಯಾಣ ಕೈಗೊಳ್ಳಲಿದ್ದು, ಅದಾದ 1 ಅಥವಾ 2 ವಾರದಲ್ಲಿ ನೌಕೆ ಸುನಿತಾ, ವಿಲ್ಲೋರ್‌ರನ್ನು ಭೂಮಿಗೆ ಕರೆತರಲಿದೆ

