Home » ಮಹಾ ರಕ್ತದಾನಿ ಜೇಮ್ಸ್‌ ನಿಧನ
 

ಮಹಾ ರಕ್ತದಾನಿ ಜೇಮ್ಸ್‌ ನಿಧನ

ರಕ್ತ ನೀಡಿ 24 ಲಕ್ಷ ಮಕ್ಕಳ ಜೀವ ಉಳಿಸಿದ್ದ

by Kundapur Xpress
Spread the love

ಕ್ಯಾನ್ಟೆರಾ : ರಕ್ತ ದಾನವನ್ನೇ ಮಹಾದಾನ ಎಂದು ಪರಿಗಣಿಸಲಾಗುತ್ತದೆ. ಹೀಗಿರುವಾಗ ಅತೀ ವಿರಳ ಮಾದರಿಯ ರಕ್ತವನ್ನು ದಾನ ಮಾಡುವ ಮೂಲಕ ವಿಶ್ವಾದ್ಯಂತ 24  ಲಕ್ಷ ಮಕ್ಕಳ ಜೀವ ಉಳಿಸಿದ್ದ ಆಸ್ಟ್ರೇಲಿಯಾದ ಜೇಮ್ಸ್ ಹ್ಯಾರಿಸನ್  ನಿಧನರಾಗಿದ್ದಾರೆ ಅವರಿಗೆ 88 ವರ್ಷ ವಯಸ್ಸಾಗಿತ್ತು

ಹ್ಯಾರಿಸನ್ ಅವರ ರಕ್ತದಲ್ಲಿನ ಪ್ಲಾಸ್ಮಾದಲ್ಲಿ ಆ್ಯಂಟಿ-ಡಿ ಎಂಬ ಅತಿ ವಿರಳ ರೋಗ ನಿರೋಧಕಗಳಿದ್ದವು. ಅವುಗಳನ್ನು ಬಳಸಿ, ಜನನದ ವೇಳೆ ತಾಯಿಯಿಂದ ಶಿಶುವಿಗೆ ರವಾನಿಸಲ್ಪಡುವ ಮಾರಣಾಂತಿಕ ಅಂಶಗಳನ್ನು ತಡೆಯಲಾಗುತ್ತಿತ್ತು. ಹೀಗೆ ಹ್ಯಾರಿಸನ್ ಅವರ ರಕ್ತ ಬಳಸಿ ಈವರೆಗೆ ವಿಶ್ವಾದ್ಯಂತ 24 ಲಕ್ಷ ಹಸುಳೆಗಳ ಜೀವ ಉಳಿಸಲಾಗಿದೆ. ತಮ್ಮ 18ನೇ ವಯಸ್ಸಿನಲ್ಲಿ ರಕ್ತದಾನ ಆರಂಭಿಸಿದ ಹ್ಯಾರಿಸನ್, 81 ರತನಕ 1,173 ಬಾರಿ ಈ ಮಹಾಕಾರ್ಯ ಮಾಡಿದ್ದಾರೆ.

ಇದನ್ನು ಸ್ಮರಿಸಿಕೊಂಡ ಲೈಫ್‌ಬ್ಲಡ್ ಸಂಸ್ಥೆಯ ಸಿಇಒ ಸ್ಟೀಫನ್ ಕಾರ್ನೆಲಿಸೆನ್ ಹ್ಯಾರಿಸನ್ ಅವರು ಪತ್ನಿ ವಿಯೋಗದ ಹೊರತಾಗಿಯೂ ರಕ್ತದಾನವನ್ನು ನಿಲ್ಲಿಸಲಿಲ್ಲ. ಇವರು ಅದ್ವಿತೀಯ ಪರಂಪರೆಯನ್ನು ಸೃಷ್ಟಿಸಿದ್ದಾರೆ. ಇಂತಹ ಇನ್ನೊಬ್ಬ ದಾನಿ ಆಸ್ಟ್ರೇಲಿಯಾಗೆ ಸಿಗುವಂತಾಗಲಿ’ ಎಂದು ಹಾರೈಸಿದ್ದಾರೆ.

 

Related Articles

error: Content is protected !!