ಹೊಸದಿಲ್ಲಿ : ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್) ದಲ್ಲಿ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದು ಭೂಮಿಗೆ ಮರಳುತ್ತಿರುವ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಮಂಗಳವಾರ ಎಕ್ಸ್ ನಲ್ಲಿ ಹಂಚಿಕೊಂಡ, ಕಳೆದ ವರ್ಷ ಜೂನ್ 5ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿದ ಸುನೀತಾ ವಿಲಿಯಮ್ಸ್ ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸಿದ್ದೇನೆ. ನೀವು ಸಾವಿರಾರು ಮೈಲುಗಳಷ್ಟು ದೂರದಲ್ಲಿದ್ದರೂ, ನೀವು ನಮ್ಮ ಹೃದಯಕ್ಕೆ ಹತ್ತಿರವಾಗಿರುತ್ತೀರಿ. ಭಾರತದ ಜನರು ನಿಮ್ಮ ಉತ್ತಮ ಆರೋಗ್ಯ ಮತ್ತು ನಿಮ್ಮ ಕಾರ್ಯಾಚರಣೆಯಲ್ಲಿ ಯಶಸ್ಸಿಗಾಗಿ ಪ್ರಾರ್ಥಿಸುತ್ತಿದ್ದಾರೆ. ನಿಮ್ಮ ಸಾಧನೆಗಳ ಬಗ್ಗೆ 1.4 ಶತಕೋಟಿ ಭಾರತೀಯರು ಯಾವಾಗಲೂ ಹೆಮ್ಮೆ ಪಡುತ್ತಾರೆ ಎಂದು ಪ್ರಧಾನಿ ಮೋದಿ ಸುನೀತಾಗೆ ಸಂದೇಶ ಕಳಿಸಿದ್ದಾರೆ.
ಸುನೀತಾ ತಾಯಿ, ಬೋನಿ ಪಾಂಡ್ಯ, ಆಕೆಯ ಮರಳುವಿಕೆಯನ್ನು ಕುತೂಹಲದಿಂದ ಕಾಯುತ್ತಿರಬಹುದು ಎಂದೂ ಅವರು ಹೇಳಿದ್ದಾರೆ. ಮಿಸ್ ವಿಲಿಯಮ್ಸ್ ಮತ್ತು ಅವರ ಸಹೋದ್ಯೋಗಿ ಬುಚ್ ವಿಕ್ಟೋರ್ ಅವರು 17 ಗಂಟೆಗಳ ಪ್ರಯಾಣಕ್ಕಾಗಿ ಐಎಸ್‌ಎಸ್‌ನಿಂದ ಹೊರಟ ಕೆಲವೇ ಗಂಟೆಗಳ ನಂತರ ಈ ಪತ್ರವನ್ನು ಸಾರ್ವಜನಿಕಗೊಳಿಸಲಾಯಿತು. ನೀವು ಹಿಂದಿರುಗಿದ ನಂತರ, ನಿಮ್ಮನ್ನು ಭಾರತದಲ್ಲಿ ನೋಡಲು ನಾವು ಎದುರು ನೋಡುತ್ತಿದ್ದೇವೆ. ಭಾರತ ತನ್ನ ಅತ್ಯಂತ ಪ್ರಸಿದ್ಧ ಹೆಣ್ಣುಮಕ್ಕಳಲ್ಲಿ ಒಬ್ಬಳಿಗೆ ಆತಿಥ್ಯ ನೀಡುವುದು ಸಂತೋಷದ ಸಂಗತಿ, ಎಂದೂ ಅವರು ಹೇಳಿದ್ದಾರೆ. ಮೋದಿ ಅವರು ಸುನಿತಾ ಪತಿ ಮೈಕೆಲ್ ವಿಲಿಯಮ್ಸ್ ಅವರಿಗೂ ಆತ್ಮೀಯ ಶುಭಾಶಯಗಳನ್ನು ತಿಳಿಸಿದ್ದಾರೆ.

