ನವದೆಹಲಿ ; ಪಾಕಿಸ್ತಾನದ ಮೇಲೆ ‘ಆಪರೇಷನ್ ಸಿಂದೂರ’ ಹೆಸರಿನಲ್ಲಿ ಭಾರತ ಪ್ರತೀಕಾರವನ್ನೇನೋ ತೀರಿಸಿಕೊಂಡಿದೆ. ಆದರೆ ಈ ಸಮರದಲ್ಲಿ ಅಮೆರಿಕ, ಇಸ್ರೇಲ್ ನಂತಹ ಕೆಲವೇ ದೇಶಗಳು ಹೊಂದಿರುವ ನಿಖರ ದಾಳಿ ಮಾಡುವ ಹಾಗೂ ಎದುರಾಳಿಗಳ ಕ್ಷಿಪಣಿ, ಡ್ರೋನ್ ಹೊಡೆದು ಹಾಕುವ ಯುದ್ಧ ತಂತ್ರಜ್ಞಾನವನ್ನು ಭಾರತ ಸಿದ್ದಿಸಿಕೊಂಡಿದೆ ಎಂಬ ಸಂದೇಶ ವಿಶ್ವಕ್ಕೇ ಪಸರಿಸಿದೆ.
1.ಪಾಕ್ ಉಗ್ರರ ನೆಲೆಗಳನ್ನು ಅತ್ಯಂತ ನಿಖರ ದಾಳಿ ಮೂಲಕ ಭಾರತ ಹೊಡೆದು ಹಾಕಿದೆ. ತಾನು ಎಲ್ಲಿ ದಾಳಿ ಮಾಡಬೇಕಿತ್ತೋ ಅಲ್ಲೇ ದಾಳಿ ಮಾಡಿದೆ. ಗೊತ್ತು ಗುರಿ ಇಲ್ಲದೆ ಬಾಂಬ್‌ಗಳ ಸುರಿಮಳೆಗೈದಿಲ್ಲ, ಎಲ್ಲ ದೇಶಗಳ ಬಳಿಯೂ ಇಂತಹ ತಂತ್ರಜ್ಞಾನ ಇಲ್ಲ. ಭಾರತದ ಬಳಿ ಇದೆ ಎಂದು ಬಹುತೇಕರಿಗೆ ಗೊತ್ತೇ ಇರಲಿಲ್ಲ!
2.ಈ ನಿಖರತೆ ಪಾಕಿಸ್ತಾನದ ವಿರ್ ಬೇಸ್ಗಳ ಮೇಲಿನ ದಾಳಿ ಗಮನಿಸಿದರೆ ತಿಳಿಯುತ್ತದೆ. ವಾಯು ನೆಲೆಗಳ ರನ್ ವೇಯ ಮೂರನೇ ಒಂದು ಭಾಗವನ್ನು ನಿಖರವಾಗಿ ಗುರುತಿಸಿ ದಾಳಿ ಮಾಡಿದರೆ ಅಲ್ಲಿ ವಿಮಾನ ಟೇಕಾಫ್, ಲ್ಯಾಂಡಿಂಗ್ ಮಾಡಲು ಸಾಧ್ಯವಾಗುವುದಿಲ್ಲ, ಅಂತಹ ದಾಳಿಯನ್ನು ಭಾರತ ಮಾಡಿ ತೋರಿಸಿದೆ. ಎಲ್ಲೋ ಒಂದು ಕಡೆ ಬಾಂಬ್ ಹಾಕಿದ್ದರೆ ವಿಮಾನ ಇಳಿಸಲು, ಹಾರಿಸಲು ಪಾಕ್‌ಗೆ ಸಮಸ್ಯೆಯೇ ಆಗುತ್ತಿರಲಿಲ್ಲ
3.ಹಮಾಸ್ ಉಗ್ರರು ರಾಕೆಟ್, ಕ್ಷಿಪಣಿ ದಾಳಿ ನಡೆಸಿದಾಗ ಎಲ್ಲವನ್ನೂ ಎಲ್ಲವನ್ನೂ ಹೊಡೆದು ಹಾಕಿ ಇಡೀ ವಿಶ್ವವನ್ನೇ ಇಸ್ರೇಲ್ ಚಿಕಿತಗೊಳಿಸಿತ್ತು. ಆದರೆ ಈಗ ಇಸ್ರೇಲ್ ಗಿಂತ ಅತ್ಯಂತ ಕರಾರುವಾಕ್ಕಾದ ವಾಯು ರಕ್ಷಣಾ ವ್ಯವಸ್ಥೆ ಭಾರತದ ಬಳಿ ಇದೆ. ಪಾಕಿಸ್ತಾನ 700 ಡೋನ್, ಕ್ಷಿಪಣಿ ಹಾರಿಸಿದರೂ ಒಂದರಿಂದಲೂ ಭಾರತಕ್ಕೆ ಘೋರ ಹಾನಿಯಾಗಿಯೇ ಇಲ್ಲ ಎಂಬುದು ಇದನ್ನು ನಿರೂಪಿಸುತ್ತದೆ.
4.ಭಾರತದ ಬಳಿ ಇರುವ ಬ್ರಹ್ಮೋಸ್ ಸೂಪರ್ ಸಾನಿಕ್ ಅಸ್ತ್ರ ಪಾಕಿಸ್ತಾನದ ನೆಲೆಗಳಿಗೆ ನುಗ್ಗಿ ಹೊಡೆದಿದೆ. ಒಮ್ಮೆ ಉಡಾವಣೆಯಾದರೆ ಇದನ್ನು ಪಾಕಿಸ್ತಾನ ಬಿಡಿ, ವಿಶ್ವದ ಯಾವ ದೇಶವೂ ತಡೆಯಲು ಆಗದು.

