Home » ನೀಟ್‌ ಪಾವಿತ್ರ್ಯವೇ ಹಾಳಾಗಿದ್ದರೆ ಮರು ಪರೀಕ್ಷೆ
 

ನೀಟ್‌ ಪಾವಿತ್ರ್ಯವೇ ಹಾಳಾಗಿದ್ದರೆ ಮರು ಪರೀಕ್ಷೆ

ಸುಪ್ರೀಂ ಕೋರ್ಟ್

by Kundapur Xpress
Spread the love

ನವದೆಹಲಿ : ವೈದ್ಯ, ದಂತ ವೈದ್ಯ ಹಾಗೂ ಆಯುಷ್ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ‘ನೀಟ್ ‘ನಲ್ಲಿ ಈ ಬಾರಿ ವ್ಯಾಪಕ ಗೋಲ್‌ಮಾಲ್ ಆಗಿದೆ ಎಂಬ ಆರೋಪಗಳ ನಡುವೆಯೇ, ವೈದ್ಯಕೀಯ ಪ್ರವೇಶ ಪರೀಕ್ಷೆಯ ಪಾವಿತ್ರ್ಯವೇ ಹಾಳಾಗಿದ್ದರೆ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರೆ, ಮರು ಪರೀಕ್ಷೆಗೆ ಆದೇಶ ಹೊರಡಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ.

ಒಂದಂತೂ ಸ್ಪಷ್ಟ. ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆ. ಟೆಲಿಗ್ರಾಂ, ವಾಟ್ಸ್ಆ್ಯಪ್ ಹಾಗೂ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಅದು ಸೋರಿಕೆಯಾಗಿದ್ದರೆ, ಕಾಡಿಚ್ಚಿನಂತೆ ಹಬ್ಬುತ್ತದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಕುರಿತು ಯಾವುದೇ ಪ್ರಶ್ನೆಯೇ ಇಲ್ಲ. ಯಾವ ಪ್ರಮಾಣದಲ್ಲಿ ಆಗಿದೆ ಎಂಬುದು ಗೊತ್ತಾಗಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.

ಈ ಪರೀಕ್ಷಾ ಅವ್ಯವಹಾರದಲ್ಲಿ ಯಾರು ತಪ್ಪಿತಸ್ಥರು ಎಂಬುದನ್ನು ಪತ್ತೆ ಹಚ್ಚಲು ಆಗದಿದ್ದರೆ, ಮರು ಪರೀಕ್ಷೆಗೆ ಆದೇಶಿಸ ಬೇಕಾಗುತ್ತದೆ. ಏನು ನಡೆದಿದೆಯೋ ಅದನ್ನು ನಿರಾಕರಿಸುವುದು ಬೇಡ. ಒಂದು ವೇಳೆ, ಕೇಂದ್ರ ಸರ್ಕಾರ ಪರೀಕ್ಷೆಯನ್ನು ರದ್ದು ಮಾಡುವುದಿಲ್ಲ ಎಂದುಕೊಳ್ಳೋಣ. ಪ್ರಶ್ನೆಪತ್ರಿಕೆ ಸೋರಿಕೆಯಿಂದ ಲಾಭ ಪಡೆದವರ ಪತ್ತೆಗೆ ಸರ್ಕಾರ ಏನು ಮಾಡುತ್ತದೆ? ಪ್ರಶ್ನೆಪತ್ರಿಕೆಸೋರಿಕೆಯಿಂದ ಎಷ್ಟು ಮಂದಿ ಲಾಭ ಪಡೆದುಕೊಂಡಿದ್ದಾರೆ ಹಾಗೂ ಅವರ ವಿರುದ್ದ ಕೇಂದ್ರ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ಎಂಬುದು ನಮಗೆ ಗೊತ್ತಾಗಬೇಕು ಎಂದು ನ್ಯಾಯಾಲಯ ಪ್ರಶ್ನಿಸಿತು.

ಈ ಬಾರಿಯ ಪರೀಕ್ಷೆಯಲ್ಲಿ 67 0  ವಿದ್ಯಾರ್ಥಿಗಳು 720 ಕ್ಕೆ 720 ಅಂಕಗಳನ್ನು ಪಡೆದುಕೊಂಡಿದ್ದಾರೆ.

   

Related Articles

error: Content is protected !!