ನವದೆಹಲಿ : ಸ್ವಚ್ಛ ಭಾರತ್ ಮಿಷನ್ ಅನ್ನು 21 ನೇ ಶತಮಾನದ ಅತಿದೊಡ್ಡ ಮತ್ತು ಅತ್ಯಂತ ಯಶಸ್ವಿ ಜನರ ಆಂದೋಲನ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಶ್ಲಾಘಿಸಿದ್ದಾರೆ. ಹಾಗೂ ಇದು ಸಾರ್ವಜನಿಕ ಆರೋಗ್ಯ ಸಮೃದ್ಧಿಯ ಹೊಸ ಮಾರ್ಗ ಎಂದು ಬಣ್ಣಿಸಿದ್ದಾರೆ.
ಬುಧವಾರ ಮಿಷನ್ನ 10 ವರ್ಷಗಳ ನೆನಪಿನ ಸಮಾರಂಭದಲ್ಲಿ ಮಾತನಾಡಿದ ಮೋದಿ, ಸಾಮೂಹಿಕ ಭಾಗವಹಿಸುವಿಕೆ ಅಭಿಯಾನವು ಸಮೃದ್ಧಿಯ ಹೊಸ ಮಾರ್ಗವಾಗಿ ಗೋಚರಿಸಿದೆ. ನೀವೆಲ್ಲರೂ ಸ್ವಚ್ಛ ಭಾರತ್ ಮಿಷನ್ನನ್ನು ಯಶಸ್ವಿಗೊಳಿಸಿದ್ದೀರಿ ಎಂದು ಹರ್ಷಿಸಿದರು. ಆಂದೋಲನಕ್ಕೆ 10 ವರ್ಷ ಸಂದಿರುವ ಕಾರಣ ಈಗ ‘ಸ್ವಚ್ಛತಾ ಪಾಕ್ಷಿಕ’ ಆರಂಭಿಸಲಾಗಿದ್ದು 15 ದಿನದಲ್ಲಿ 27 ಲಕ್ಷಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆದಿವೆ. 28 ಕೋಟಿ ಮಂದಿ ಇದ್ದರು ಎಂದು ಶ್ಲಾಘಿಸಿದರು.