Home » ಚಾಂಪಿಯನ್ಸ್‌ಗೆ ತವರಿನಲ್ಲಿ ಸ್ಮರಣೀಯ ಸ್ವಾಗತ
 

ಚಾಂಪಿಯನ್ಸ್‌ಗೆ ತವರಿನಲ್ಲಿ ಸ್ಮರಣೀಯ ಸ್ವಾಗತ

by Kundapur Xpress
Spread the love

ನವದೆಹಲಿ : ಕೆರಿಬಿಯನ್ ನೆಲದಲ್ಲಿ ಟಿ-20 ವಿಶ್ವಕಪ್ ಗೆದ್ದು 4 ದಿನಗಳ ಬಳಿಕ ತವರಿಗೆ ಮರಳಿದ ರೋಹಿತ್ ಶರ್ಮ ಸಾರಥ್ಯದ ಭಾರತ ತಂಡಕ್ಕೆ ಗುರುವಾರ ಅದ್ದೂರಿ ಸ್ವಾಗತ ನೀಡಲಾಯಿತು. ರಾಷ್ಟ್ರ ರಾಜಧಾನಿಗೆ ಬಂದಿಳಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸಕ್ಕೆ ತೆರಳಿದ ತಂಡಕ್ಕೆ ವಿಶೇಷ ಅತಿಥ್ಯ ನೀಡಲಾಯಿತು. ಈ ವೇಳೆ ಪ್ರಧಾನಿ ಮೋದಿ ಜತೆಗೆ ಆಟಗಾರರು ಮಾತುಕತೆ ನಡೆಸಿದರು. ತಂಡಕ್ಕೆ ಪ್ರಧಾನಿ ಅಭಿನಂದನೆ ಸಲ್ಲಿಸಿದರು

ಬಳಿಕ ಮುಂಬೈಗೆ ಆಗಮಿಸಿದ ತಂಡ ಮಳೆಯ ನಡುವೆ ಮರೀನ್ ಡ್ರೈವ್‌ನಲ್ಲಿ 2 ಕಿಲೋಮೀಟರ್ ತೆರೆದ ಬಸ್‌ ನಲ್ಲಿ ಮೆರವಣಿಗೆಯಲ್ಲಿ ವಾಂಖೆಡೆ ಸ್ಟೇಡಿಯಂಗೆ ಸಾಗಿತು. ಸ್ಟೇಡಿಯಂನಲ್ಲಿ ಬಿಸಿಸಿಐ ವತಿಯಿಂದ ತಂಡವನ್ನು ಸನ್ಮಾನಿಸಲಾಯಿತು ಮತ್ತು 125 ಕೋಟಿ ರೂ. ಬಹುಮಾನವನ್ನೂ ವಿತರಿಸಲಾಯಿತು. ಒಟ್ಟಾರೆ, 13 ವರ್ಷಗಳ ಬಳಿಕ ಐಸಿಸಿ ವಿಶ್ವಕಪ್ ಗೆಲುವಿನ ಸಂಭ್ರಮ ಕಂಡ ಟೀಮ್ ಇಂಡಿಯಾ ಪಾಲಿಗೆ ಗುರುವಾರ ಸ್ಮರಣೀಯ ದಿನವೆನಿಸಿತು.

   

Related Articles

error: Content is protected !!