Home » ಪಹಲ್ಗಾಮ್‌ ಕಾಡಲ್ಲೇ ಉಗ್ರರ ವಾಸ
 

ಪಹಲ್ಗಾಮ್‌ ಕಾಡಲ್ಲೇ ಉಗ್ರರ ವಾಸ

by Kundapur Xpress
Spread the love

ಶ್ರೀನಗರ : ಭೀಕರ ಪಹಲ್ದಾಂ ನರಮೇಧದ ಬಳಿಕ ಬಿಲ ಸೇರಿರುವ ಉಗ್ರರ ಹುಡುಕಾಟಕ್ಕೆ ಭದ್ರತಾ ಪಡೆಗಳು ಭಾರೀ ಕಾರ್ಯಾಚರಣೆ ಮುಂದುವರೆಸಿವೆ. ಈ ನಡುವೆ ಘಟನೆ ಬಳಿಕ ಪರಾರಿಯಾಗಿರುವ ಉಗ್ರರು, ಕಣಿವೆ ರಾಜ್ಯದಲ್ಲಿ ಉಗ್ರ ಚಟುವಟಿಕೆಗಳಿಗೆ ಖ್ಯಾತಿ ಹೊಂದಿರುವ ದಕ್ಷಿಣದ ಕಾಶ್ಮೀರದ ಪಹಲ್ದಾಂನ ಅರಣ್ಯದಲ್ಲೇ ಅಡಗಿರುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾಹಿತಿಯನ್ನು ಕಲೆ ಹಾಕುವಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಯಶಸ್ವಿಯಾಗಿದೆ.

ದಾಳಿಯ ಬಳಿಕ ಭದ್ರತಾ ಪಡೆಗಳು ತೀವ್ರ ಕಾರ್ಯಾಚರಣೆ ನಡೆಸುವುದು ಖಚಿತವಿದ್ದ ಕಾರಣ, ತಾವು ಅಡಗಿರುವ ಸ್ಥಳದಲ್ಲೇ ಸುದೀರ್ಘ ಅವಧಿಗೆ ಬೇಕಾದ ಆಹಾರ ವ್ಯವಸ್ಥೆಗಳನ್ನು ಅವರು ಮಾಡಿಕೊಂಡಿದ್ದಾರೆ ಎಂದು ಎನ್‌ಐಎ ಮೂಲಗಳು ಹೇಳಿವೆ.

 

Related Articles

error: Content is protected !!