Home » ಅನಾಮಿಕರ ಗುಂಡಿಗೆ ಉಗ್ರ ಸೈಫುಲ್ಲಾ ಬಲಿ
 

ಅನಾಮಿಕರ ಗುಂಡಿಗೆ ಉಗ್ರ ಸೈಫುಲ್ಲಾ ಬಲಿ

by Kundapur Xpress
Spread the love

ಇಸ್ಲಾಮಾಬಾದ್ : 2001ರಲ್ಲಿ ರಾಂಪುರದಲ್ಲಿ ಸಿ ಆ‌ರ್ ಪಿ ಎಫ್ ಶಿಬಿರದ ಮೇಲಿನ ದಾಳಿ, 2005ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ಮೇಲಿನ ದಾಳಿ ಮತ್ತು 2006ರಲ್ಲಿ ನಾಗಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಪ್ರಧಾನ ಕಚೇರಿಯ ಮೇಲಿನ ದಾಳಿ ಸೇರಿದಂತೆ ಪ್ರಮುಖ ಭಯೋತ್ಪಾದಕ ದಾಳಿಗಳ ಸಂಚುಕೋರನಾಗಿದ್ದ ಲಷ್ಕರ್ ತೈಯಾದ ಪಾತಕಿ ಸೈಫುಲ್ಲಾ ಖಾಲಿದ್‌ನನ್ನು ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿ ಅಪರಿಚಿತ ಬಂದೂಕುಧಾರಿಗಳು ಹತ್ಯೆಗೈದಿದ್ದಾರೆ.

ಭಾರತದಲ್ಲಿನ ಸಂಚುಕೋರನಾಗಿದ್ದು, ಹಲವು ಭಯೋತ್ಪಾದಕ ದಾಳಿಗಳಲ್ಲಿ ಕೃತ್ಯಗಳ ಹಲವು ಸಾವು ನೋವುಗಳುಂಟಾಗಿದ್ದವು. ಬಳಿಕ ನೇಪಾಳದಲ್ಲಿ ಸುಳ್ಳು ಹೆಸರಿನಲ್ಲಿ, ತಲೆಮರೆಸಿಕೊಂಡು ಸ್ಥಳೀಯ ನಗ್ಮಾಭಾನು ಎಂಬಾಕೆಯನ್ನು ವಿವಾಹವಾಗಿದ್ದ.

ಮೂಲತಃ ನೇಪಾಳದವನಾಗಿದ್ದ ಖಾಲಿದ್ ಇತ್ತೀಚೆಗೆ ಪಾಕಿಸ್ತಾನದ ಸಿಂಥ್ ಪ್ರಾಂತದ ಬದಿನ್ ಜಿಲ್ಲೆಯ ಮಟ್ಟಿ ಎಂಬಲ್ಲಿಗೆ ಸ್ಥಳಾಂತರಗೊಂಡು ಭಯೋತ್ಪಾದಕ ಸಂಘಟನೆ ಲಷ್ಕರ್ ತೊಯ್ದಾ ಮತ್ತು ಅದರ ಮಾತೃಸಂಘಟನೆ ಜಮಾತ್ ಉದ್ ದಾವಾಕ್ಕಾಗಿ ನೇಮಕಾತಿ, ನಿಧಿ ಸಂಗ್ರಹಣೆ ಮತ್ತು ಸಾಧನಗಳ ಒದಗಣೆಯಂತಹ ಚಟುವಟಿಕೆಗಳಲ್ಲಿ ತೊಡಗಿದ್ದ ಎನ್ನಲಾಗಿದೆ.

 

Related Articles

error: Content is protected !!