Home » ಭೂಕಂಪನ : ಟಿಬೆಟ್‌ನಲ್ಲಿ 126 ಜನ ಬಲಿ
 

ಭೂಕಂಪನ : ಟಿಬೆಟ್‌ನಲ್ಲಿ 126 ಜನ ಬಲಿ

by Kundapur Xpress
Spread the love

ನವದೆಹಲಿ : ಟಿಬೆಟ್ -ನೇಪಾಳ ಗಡಿಯಲ್ಲಿರುವ ಜಗತ್ತಿನ ಅತಿ ಎತ್ತರದ ಶಿಖರ ಹಿಮಾಲಯದ ಮೌಂಟ್ ಎವರೆಸ್ಟ್ ತಪ್ಪಲಿನ ಕ್ಸಿಗಾಝ ಪಟ್ಟಣದಲ್ಲಿ ಮಂಗಳವಾರ ಸಂಭವಿಸಿದ ಭೀಕರ ಭೂಕಂಪದಲ್ಲಿ 126 ಮಂದಿ ಬಲಿಯಾದ್ದು 188 ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಭೂಕಂಪದ ತೀವ್ರತೆಗೆ ನೆರೆಯ ನೇಪಾಳ, ಭಾರತದ ಬಿಹಾರ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲೂ ಕಂಪನದ ಅನುಭವ ಆಗಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲ

ಟಿಬೆಟ್ ಗಡಗಡ : ಹಿಮಾಲಯದ ತಪ್ಪಲಲ್ಲಿರುವ ಟಿಬೆಟ್‌ನ ಡಿಂಗ್ರಿ ಕೌಂಟಿ ಅಥವಾ ಶಿಂಗಟ್ಟೆಯ ಕಿಗಾಯಿಯಲ್ಲಿ ಬೆಳಗ್ಗೆ 9.05ಕ್ಕೆ ಭೂಮಿ ಕಂಪಿಸಿದೆ.  ಈ ಭೂಕಂಪದ ತೀವ್ರತೆ 6.8 ತೀವ್ರತೆ ಇತ್ತು ಎಂದು ಚೀನಾ ಹೇಳಿಕೊಂಡರೆ  7.1 ಆಗಿತ್ತು ಎಂದು ಅಮೆರಿಕದ ಭೂವಿಜ್ಞಾನ ಸೇವೆಗಳು ತಿಳಿಸಿವೆ ಭೂಕಂಪ ಸಂಭವಿಸಿದ ಕೆಲ ಗಂಟೆಗಳ ಅವಧಿಯಲ್ಲಿ 40ಕ್ಕೂ ಹೆಚ್ಚು ಕಂಪನಗಳ ಅನುಭವ ಆಗಿದೆ.

ಡಿಂಗ್ರಿ ಅಥವಾ ಶಿಂಗಸ್ಟ ಕೌಂಟಿಯು ಟಿಬೆಟ್* ನ ಪವಿತ್ರ ನಗರಗಳಲ್ಲಿ ಒಂದಾಗಿದೆ. ಭಾರತದ ಗಡಿಗೂ ಹೊಂದಿ ಕೊಂಡಂತಿರುವ ಈ ಕೌಂಟಿಯಲ್ಲಿ ದಲೈಲಾಮಾ ಬಳಿಕದ ಟಿಬೆಟ್‌ನ ಎರಡನೇ ಪ್ರಮುಖ ಬೌದ್ಧ ಧರ್ಮಗುರುವಾದ ಪಂಚೆನ್ ಲಾಮಾ ಅವರ ಸಾಂಪ್ರದಾಯಿಕ ಪೀಠ ಇದೆ. ಟಿಬೆಟ್‌ನ ಬೌದ್ಧ ಧರ್ಮಾನುಯಾಯಿಗಳ ಪಾಲಿಗೆ ಈ ಪೀಠ ಮಹತ್ವದ್ದಾಗಿದೆ.

 

Related Articles

error: Content is protected !!