Home » ಆತ್ಮನಿರ್ಭರ ಭಾರತಕ್ಕೆ ಅಟಲ್‌ ಪ್ರೇರಣಾ ಶಕ್ತಿ
 

ಆತ್ಮನಿರ್ಭರ ಭಾರತಕ್ಕೆ ಅಟಲ್‌ ಪ್ರೇರಣಾ ಶಕ್ತಿ

ಪ್ರಧಾನಿ ಮೋದಿ

by Kundapur Xpress
Spread the love

ಹೊಸದಿಲ್ಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 7ನೇ ಪುಣ್ಯತಿಥಿ ಸಂದರ್ಭ ಅವರನ್ನು ಸ್ಮರಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ಆತ್ಮನಿರ್ಭರ ಮತ್ತು ಅಭಿವೃದ್ಧಿಶೀಲ ಭಾರತ ನಿರ್ಮಿಸಲು ಈಗಲೂ ಅವರು ಎಲ್ಲರಿಗೂ ಪ್ರೇರಣಾ ಶಕ್ತಿ ಎಂದು ಹೇಳಿದ್ದಾರೆ.

ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 7ನೇ ಪುಣ್ಯತಿಥಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದೌಪದಿ ಮುರ್ಮು, ಕೇಂದ್ರ ಸಚಿವರು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸಹಿತ ಇತರ ಹಲವು ಗಣ್ಯರು ಶನಿವಾರ ವಾಜಪೇಯಿ ಅವರ ಸದೈವ್ ಅಟಲ್ ಸಮಾಧಿಯಲ್ಲಿ ಗೌರವ ನಮನ ಸಲ್ಲಿಸಿದರು.

ಭಾರತದ ಸರ್ವತೋಮುಖ ಅಭಿವೃದ್ಧಿಗಾಗಿ ವಾಜಪೇಯಿ ಅವರ ಸಮರ್ಪಣಾ ಭಾವ ಮತ್ತು ಸೇವಾ ಸ್ಫೂರ್ತಿ, ಆತ್ಮನಿರ್ಭರ ಮತ್ತು ಅಭಿವೃದ್ಧಿಶೀಲ ಭಾರತ ನಿರ್ಮಿಸಲು ನಮ್ಮೆಲ್ಲರಿಗೆ ಈಗಲೂ ಪ್ರೇರಣಾ ಶಕ್ತಿ ಎಂದು ಪ್ರಧಾನಿ ಮೋದಿ ಸ್ಮರಿಸಿಕೊಂಡರು.

 

Related Articles

error: Content is protected !!