103
ವಾಷಿಂಗ್ಟನ್ : ಇಡೀ ದೇಶ ಗೌರಿ-ಗಣೇಶ ಹಬ್ಬದ ಸಂಭ್ರಮದಲ್ಲಿ ಮುಳುಗಿರುವಾಗಲೇ ಭಾರತಕ್ಕೆ ಅಮೆರಿಕ ಭಾರೀ ತೆರಿಗೆ ಶಾಕ್ ನೀಡಿದೆ. ರಷ್ಯಾದಿಂದ ತೈಲ ಖರೀದಿಯ ನೆಪವೊಡ್ಡಿ ಈ ಹಿಂದೆ ಘೋಷಿಸಿದಂತೆ ಭಾರತದಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇ.25ರಷ್ಟು ಹೆಚ್ಚುವರಿ ತೆರಿಗೆ ವಿಧಿಸುವ ಸಂಬಂಧ ಮಂಗಳವಾರ ಕರಡು ಅಧಿಸೂಚನೆ ಹೊರಡಿಸಿದೆ. ಆ.27ರಿಂದ ಈ ಹೆಚ್ಚುವರಿ ತೆರಿಗೆ ಅನುಷ್ಠಾನಕ್ಕೆ ಬರಲಿದೆ.
ಈಗಾಗಲೇ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಅಮೆರಿಕ ಶೇ.25 ರಷ್ಟು ತೆರಿಗೆ ಹೇರಿದೆ. ಇದೀಗ ಹೆಚ್ಚುವರಿ ಶೇ.25ರಷ್ಟು ತೆರಿಗೆಯಿಂದಾಗಿಭಾರತದಿಂದ ಅಮೆರಿಕಕ್ಕೆ ರಫ್ತಾಗುವ ವಸ್ತುಗಳ ಮೇಲೆ ಒಟ್ಟಾರೆ ಶೇ.50ರಷ್ಟು ತೆರಿಗೆ ಹೊರೆ ಬಿದ್ದಂತಾಗಲಿದೆ. ಭಾರತದಿಂದ ರಫ್ತಾಗುವ ಶೇ.66ರಷ್ಟು ಉತ್ಪನ್ನಗಳ ಮೇಲೆ ತೆರಿಗೆಯ ಕಾರ್ಮೋಡ ಬೀಳಲಿದೆ. ಅಂದರೆ ಸುಮಾರು 4 ಲಕ್ಷ ಕೋಟಿ ರು. ಮೌಲ್ಯದ ರಫ್ತಿನ ಮೇಲೆ ಹೊಡೆತ ಬೀಳುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

