136
ಹೊಸದಿಲ್ಲಿ : ರಷ್ಯಾದ ತೈಲ ಖರಿದಿಗೆ ಸಂಬಂಧಿಸಿದಂತೆಭಾರತದ ಮೇಲೆ ಶೇ.25 ಸುಂಕ ವಧಿಸುವ ಪ್ರಸ್ತಾಪವನ್ನು ತಮ್ಮ ಆಡಳಿತ ಮುಂದುವರಿಸುವ ಸಾಧ್ಯತೆಯಿಲ್ಲ ಎಂದು ಆಮರಿಕ ಅಧ್ಯಕ್ಷ ಡೊನಾಲ್ಡ್ ಟಿಂಪ್ ಸುಳಿವು ನೀಡಿದ್ದಾರೆ.
ವಾಷಿಂಗ್ಟನ್ ಮತ್ತು ಹೊಸದಿಲ್ಲಿಯ ನಡುವಿನ ವ್ಯಾಪಾರ ಉದ್ದಿಗ್ಧತೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಈ ತಂಗಳ ಆರಂಭದಲ್ಲಿ ಯುಎಸ್, ಭಾರತೀಯ ಸರಕುಗಳ ಮೇಲೆ 25% ಸುಂಕ ವಿಧಿಸಿತ್ತು. ನಂತರ ಅದನ್ನು ರಷ್ಯಾದಿಂದ ಭಾರತದ ತೈಲ ಆಮದು ಮುಂದುವರಿಸಿದೆ ಎಂದು 50%ಕ್ಕೆ ಏರಿಸಿತು. ವಾಷಿಂಗ್ಟನ್ ತನ್ನ ನಡೆಯನ್ನು ಸಮರ್ಥಿಸಿಕೊಂಡರೆ, ಭಾರತ ಈ ಕ್ರಮ ಅನ್ಯಾಯ, ನ್ಯಾಯ ಸಮ್ಮತವಲ್ಲದ್ದು ಮತ್ತು ಅಸಮಂಜಸ ಎಂದು ತೀವ್ರವಾಗಿ ಟೀಕಿಸಿತ್ತು. ಜವಳಿ, ಸಾಗರ ಉತ್ಪನ್ನಗಳು ಮತ್ತು ಚರ್ಮದಂತಹ ಪ್ರಮುಖ ರಫ್ತುಗಳ ಮೇಲೆ ಇದು ತೀವ್ರ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿತ್ತು. ಭಾರತ ಆರ್ಥಿಕ ಒತ್ತಡಕ್ಕೆ ತಲೆಬಾಗುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದರು.

