Home » ವಿಮಾನ ಹೈಜಾಕ್‌ಗೆ ಯತ್ನ : ಗುಂಡಿನ ದಾಳಿಗೆ ಬಲಿ
 

ವಿಮಾನ ಹೈಜಾಕ್‌ಗೆ ಯತ್ನ : ಗುಂಡಿನ ದಾಳಿಗೆ ಬಲಿ

by Kundapur Xpress
Spread the love

ಮೆಕ್ಸಿಕೋ : ಮಧ್ಯ ಅಮೆರಿಕದ ರಾಷ್ಟ್ರವಾಗಿರುವ ಬಲಿಜ್‌ನಲ್ಲಿ ಸಿನಿಮೀಯ ರೀತಿಯಲ್ಲಿ ವಿಮಾನ ಹೈಜಾಕ್ ಘಟನೆಯೊಂದು ನಡೆದಿದೆ. ಮೆಕ್ಸಿಕೋ ಗಡಿಯ ಸಮೀಪವಿರುವ ಕೊರೊಜಲ್ ನಿಂದ ಸ್ಯಾನ್ ಪೆಡೊಗೆ ತೆರಳುತ್ತಿದ್ದ ಸಣ್ಣ ವಿಮಾನವನ್ನು ಹೈಜಾಕ್ ಮಾಡಿದ ವ್ಯಕ್ತಿಯೊಬ್ಬ ಅದನ್ನು ಅಮೆರಿಕದ ಕಡೆ ತಿರುಗಿಸುವಂತೆ ಆಗ್ರಹಿಸಿ, ಓರ್ವ ಸಿಬ್ಬಂದಿ ಸೇರಿ 2 ಪ್ರಯಾಣಿಕರಿಗೆ ಇರಿದಿದ್ದಾನೆ. ಬಳಿಕ ಇರಿತಕ್ಕೊಳಗಾದ ಪ್ರಯಾಣಿಕನಿಂದಲೇ ಗುಂಡೇಟಿಗೆ ಬಲಿಯಾಗಿದ್ದಾನೆ. ಬಳಿಕ ವಿಮಾನವನ್ನು ಸುರಕ್ಷಿತವಾಗಿ ಲೇಡಿವಿಲ್ಲೆ ಎಂಬಲ್ಲಿ ಇಳಿಸಲಾಗಿದೆ. ಹೈಜಾಕ್ ಮಾಡಿದವನನ್ನು ಅಕಿನೈಲಾ ಟೇಲರ್‌ ಎಂದು ಗುರುತಿಸಲಾಗಿದ್ದು, ಆತ ಅಮೆರಿಕದ ಸೇನೆಯಲ್ಲಿದ್ದವ ಎನ್ನಲಾಗಿದೆ.

 

Related Articles

error: Content is protected !!