Home » ಎಲಾನ್‌ ಮಸ್ಕ್ ಜತೆ ಪ್ರಧಾನಿ ಮೋದಿ ಮಾತುಕತೆ
 

ಎಲಾನ್‌ ಮಸ್ಕ್ ಜತೆ ಪ್ರಧಾನಿ ಮೋದಿ ಮಾತುಕತೆ

ಸದ್ಯದಲ್ಲೇ ಟೆಸ್ಲಾ ಕಾರು ಭಾರತಕ್ಕೆ

by Kundapur Xpress
Spread the love

ನವದೆಹಲಿ : ಜಗತ್ತಿನ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಾರುಗಳು ಭಾರತಕ್ಕೆ ಪ್ರವೇಶಿಸಲಿವೆ ಎಂಬ ಸುದ್ದಿಯ ನಡುವೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಮಸ್ಕ್ ಮಾತುಕತೆ ನಡೆಸಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಮೋದಿ, ‘ಮಸ್ಕ್ ಜತೆ ಹಲವು ವಿಷಯಗಳ ಬಗ್ಗೆ ದೂರವಾಣಿ ಮಾತುಕತೆ ನಡೆಸಲಾಯಿತು. ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಸಹಯೋಗಕ್ಕೆ ಇರುವ ಅಪಾರ ಸಾಮರ್ಥ್ಯದ ಬಗ್ಗೆ ಚರ್ಚಿಸಿದ್ದೇವೆ. ಈ ಕ್ಷೇತ್ರಗಳಲ್ಲಿ ಅಮೆರಿಕದೊಂದಿಗೆ ನಮ್ಮ ಪಾಲುದಾರಿಕೆಯನ್ನು ಮುಂದುವರಿಸಲು ಭಾರತ ಬದ್ದವಾಗಿದೆ ಎಂದರು

ಮಸ್ಕ್ ಅವರ ಟೆಸ್ಲಾ ಕಂಪನಿಯು ಈ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಮುಂಬೈಗೆ ಸಾವಿರ ಕಾರುಗಳನ್ನು ತರಲಿದ್ದು, ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಮಾರಾಟ ಮಾಡಲಿದೆ ಎಂದು ಬ್ಲೂಂಬರ್ಗ್ ವರದಿ ಮಾಡಿದೆ.

 

Related Articles

error: Content is protected !!