91
ಗಾಂಧಿನಗರ : ಉತ್ತರಾಖಂಡದ ಬೆನ್ನಲ್ಲೇ, ಬಿಜೆಪಿ ಆಡಳಿತದ ಮತ್ತೊಂದು ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಪ್ರಕ್ರಿಯೆ ಮತ್ತಷ್ಟು ಚುರುಕು ಪಡೆದಿದೆ. ಯುಸಿಸಿ ಕರಡು ಸಿದ್ಧಪಡಿಸಲು ಗುಜರಾತ್ ಸರ್ಕಾರದಿಂದ, ನಿವೃತ್ತ ನ್ಯಾ| ರಂಜನಾ ದೇಸಾಯಿ ನೇತೃತ್ವದಲ್ಲಿ ರಚಿಸಲಾದ 5 ಸದಸ್ಯರ ಉನ್ನತ ಮಟ್ಟದ ಸಮಿತಿಯು ಜನಾಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ. ಸಮಿತಿಯು ಮಂಗಳವಾರ ಮೊದಲ ಸಭೆ ನಡೆಸಿದ್ದು, ಈ ವೇಳೆ http://www.uccgujarat.in ww ಪೋರ್ಟಲ್ ಬಿಡುಗಡೆಗೊಳಿಸಲಾಯಿತು
ಬಳಿಕ ಮಾತನಾಡಿದ ನ್ಯಾ| ದೇಸಾಯಿ, ‘ರಾಜ್ಯಕ್ಕೆ ಸಂಹಿತೆಯ ಅಗತ್ಯವೇನು ಎಂಬುದನ್ನು ತೋರಿಸುವ ಕೆಲಸವನ್ನು ಸಮಿತಿಗೆ ವಹಿಸಲಾಗಿದ್ದು, ಸ್ತ್ರೀಯರಿಗೆ ಸಮಾನ ಹಕ್ಕು ಹಾಗೂ ಮಕ್ಕಳ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಕರಡು ಸಿದ್ಧಪಡಿಸುತ್ತೇವೆ. ವಿವಾಹ-ವಿಚ್ಛೇದನದ ವಿಷಯದಲ್ಲಿ ಸಮಾನ ಹಕ್ಕಿರಬೇಕು. ಅವುಗಳನ್ನು ದಾಖಲಿಸಬೇಕು. ಪಿತ್ರಾರ್ಜಿತ ಕಾನೂನು ಮತ್ತು ಲಿವ್ ಇನ್ ಸಂಬಂಧಗಳ ಕರಡನ್ನು ಶೀಘ್ರದಲ್ಲೇ ಸಿದ್ಧಪಡಿಸಲಾಗುವುದು’ ಎಂದರು.

