Home » ನ್ಯಾ. ವರ್ಮಾ ಮನೆಯಲ್ಲಿ ಜಡ್ಜ್‌ಗಳ ತಲಾಶ್
 

ನ್ಯಾ. ವರ್ಮಾ ಮನೆಯಲ್ಲಿ ಜಡ್ಜ್‌ಗಳ ತಲಾಶ್

by Kundapur Xpress
Spread the love

ನವದೆಹಲಿ : ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ನಿವಾಸದಲ್ಲಿ ಭಾರೀ ಪ್ರಮಾಣದಲ್ಲಿ ಹಣ ಪತ್ತೆಯಾದ ಪ್ರಕರ ಣದ ಕುರಿತು ಸುಪ್ರೀಂ ಕೋರ್ಟ್ ತ್ರಿಸದಸ್ಯ ನ್ಯಾಯಾಧೀಶರ ಆಂತರಿಕ ತನಿಖಾ ಸಮಿತಿಯು ಮಂಗಳವಾರದಂದು ವಿಚಾರಣೆ ಆರಂಭಿಸಿದೆ.

ತುಘಲಕ್ ಕ್ರೆಸೆಂಟ್ ರಸ್ತೆಯಲ್ಲಿರುವ ನ್ಯಾ. ವರ್ಮಾ ಅವರ ನಿವಾಸಕ್ಕೆ ತಂಡ ಭೇಟಿ ನೀಡಿದೆ. ಸುಮಾರು 30-35 ನಿಮಿಷ ಮನೆಯಲ್ಲಿದ್ದ ನ್ಯಾಯಾಧೀಶರು ಕಂತೆ ಕಂತೆ ಸುಟ್ಟ ನೋಟು ಪತ್ತೆಯಾದ ಸ್ಥಳ ಪರಿಶೀಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಂಜಾಬ್‌ ಮತ್ತು ಹರ್ಯಾಣಹೈಕೋರ್ಟ್ ಮುಖ್ಯ ನ್ಯಾಯಾಧೀಶ ನ್ಯಾ| ಶೀಲ್ ನಾಗು, ಹಿಮಾಚಲ ಪ್ರದೇಶದ ಮುಖ್ಯ ನ್ಯಾಯಾಧೀಶ ನ್ಯಾ. ಜಿ.ಎಸ್.ಸಂಧಾವಾಲಿಯಾ ಮತ್ತು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶೆ ನ್ಯಾ| ಅನು ಶಿವರಾಮನ್ ಇವರು ತನಿಖಾ ತಂಡದಲ್ಲಿದ್ದಾರೆ.

 

Related Articles

error: Content is protected !!