Home » ದಾಳೀಲಿ ನೌಕಾಧಿಕಾರಿ ನರ್ವಾಲ್ ಸಾವು
 

ದಾಳೀಲಿ ನೌಕಾಧಿಕಾರಿ ನರ್ವಾಲ್ ಸಾವು

ಏ.4ಕ್ಕೆ ನಿಶ್ಚಿತಾರ್ಥ, ಏ.16ಕ್ಕೆ ಮದುವೆ, ಏ.22ಕ್ಕೆ ಮರಣ

by Kundapur Xpress
Spread the love

ನವದೆಹಲಿ :  ಪಹಲ್ಲಾಂ ಉಗ್ರ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ನೌಕಾಪಡೆ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ನೆನೆದು ಪತ್ನಿ ಹಿಮಾಂಶಿ ಅವರು ನರ್ವಾಲ್ ಅವರ ಪಾರ್ಥಿವ ಶರೀರದ ಎದುರು ಕಣ್ಣೀರು ಹಾಕಿದ್ದು ಎಂಥ ಕಟುಕರ ಎದೆಯನ್ನೂ ಕರಗಿಸುವಂತಿತ್ತು

ಏ.16ರಂದು ಚಂಡೀಗಢ ಮೂಲದ ನರ್ವಾಲ್ ಮದುವೆಯಾಗಿದ್ದರು. ಮಧುಚಂದ್ರಕ್ಕೆಂದು ತೆರಳಿದಾಗ ಅವರನ್ನು ಉಗ್ರರು ಹತ್ಯೆ ಮಾಡಿದ್ದರು. ಬಳಿಕ ಅವರ ಶವದ ಪಕ್ಕ ಪತ್ನಿ ಹಿಮಾಂಶಿ ಕುಳಿತ ದೃಶ್ಯ ವೈರಲ್ ಆಗಿತ್ತು. ಕೊಚ್ಚಿಯಲ್ಲಿ ನೌಕಾಧಿಕಾರಿಯಾಗಿದ್ದ ನರ್ವಾಲ್ ಅವರ ಶರೀರವನ್ನು ತವರಿಗೆ ಕೊಂಡೊಯ್ಯುವ ಮುನ್ನ ಬುಧವಾರ ದೆಹಲಿಗೆ ತರಲಾಯಿತು. ಅಂತಿಮ ನಮನ ಸಲ್ಲಿಸುವಾಗ ಅವರ ಪತ್ನಿ ಹಿಮಾಂಶಿ ನರ್ವಾಲ್ ಕಣ್ಣೀರು ಹಾಕಿದರು.

 

Related Articles

error: Content is protected !!